ಚಾಮರಾಜನಗರ: ಜಿಂಕೆ ಕೊಂದು ಅದರ ಮಾಂಸ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ಹನೂರು ತಾಲೂಕಿನ ಭದ್ರಯ್ಯನಹಳ್ಳಿಯಲ್ಲಿ ನಡೆದಿದೆ.
ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪಿ ಬಂಧನ - ಜಿಂಕೆ ಬೇಟೆ
ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಕೌದಳ್ಳಿ ಶಾಖೆಯ ಚನ್ನೂರು ಗಸ್ತಿನ ವಿಠಲಯ್ಯನ ಬಂಡೆ ಬಳಿ ಖಾಸಗಿ ಜಮೀನಿಗೆ ಬಂದಿದ್ದ ಜಿಂಕೆ ಕೊಂದು ಮಾಂಸ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಜಿಂಕೆ ಬೇಟೆ
ಭದ್ರಯ್ಯನಹಳ್ಳಿ ಗ್ರಾಮದ ನಾಗರಾಜು (33) ಬಂಧಿತ ಆರೋಪಿ. ಈತ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಕೌದಳ್ಳಿ ಶಾಖೆಯ ಚನ್ನೂರು ಗಸ್ತಿನ ವಿಠಲಯ್ಯನ ಬಂಡೆ ಬಳಿ ಖಾಸಗಿ ಜಮೀನಿಗೆ ಬಂದಿದ್ದ ಜಿಂಕೆಯನ್ನು ಕೊಂದು ಮಾಂಸ ಸಾಗಿಸುತ್ತಿದ್ದ ಎನ್ನಲಾಗಿದೆ.
ಈ ಕುರಿತು ಖಚಿತ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ದಾಳಿ ನಡೆಸಿ, 30 ಕೆಜಿ ಜಿಂಕೆ ಮಾಂಸ, ಚೂರಿ, ಕುಡುಗೋಲು ಮತ್ತು ಜಿಂಕೆ ಚರ್ಮ ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.