ಚಾಮರಾಜನಗರ:ಮನೆಯಲ್ಲಿ ಜಿಂಕೆ ಮಾಂಸ ಶೇಖರಿಸಿಟ್ಟುಕೊಂಡಿದ್ದ ಘಟನೆ ಚಾಮರಾಜನಗರ ತಾಲೂಕಿನ ಕೋಳಿಪಾಲ್ಯದಲ್ಲಿ ನಡೆದಿದೆ.
ಮನೆಯಲ್ಲಿ ಜಿಂಕೆ ಮಾಂಸ ಸಂಗ್ರಹ: ಪರಿಶೀಲನೆ ವೇಳೆ ದಂಪತಿ ಪರಾರಿ! - ಮನೆಯಲ್ಲಿ ಜಿಂಕೆ ಮಾಂಸ ಶೇಖರಣೆ ನ್ಯೂಸ್
ನಾಗರಾಜ ಎಂಬುವವರ ಮನೆಯಲ್ಲಿ ಜಿಂಕೆ ಮಾಂಸ ಶೇಖರಿಸಿಟ್ಟುಕೊಂಡಿದ್ದ ಘಟನೆ ಚಾಮರಾಜನಗರ ತಾಲೂಕಿನ ಕೋಳಿಪಾಲ್ಯದಲ್ಲಿ ನಡೆದಿದೆ. ಅರಣ್ಯಾಧಿಕಾರಿ ಕಾಂತರಾಜು ನೇತೃತ್ವದಲ್ಲಿ ದಾಳಿ ನಡೆಸಿ 4 ಕೆಜಿ ಜಿಂಕೆ ಮಾಂಸವನ್ನು ವಶಪಡಿಸಿಕೊಂಡಿದ್ದು, ವೃದ್ಧ ದಂಪತಿ ಪರಾರಿಯಾಗಿದ್ದಾರೆ.
![ಮನೆಯಲ್ಲಿ ಜಿಂಕೆ ಮಾಂಸ ಸಂಗ್ರಹ: ಪರಿಶೀಲನೆ ವೇಳೆ ದಂಪತಿ ಪರಾರಿ! latest deer meet storage news](https://etvbharatimages.akamaized.net/etvbharat/prod-images/768-512-5207687-thumbnail-3x2-xyz.jpg)
ಮನೆಯಲ್ಲಿ ಜಿಂಕೆ ಮಾಂಸ ಶೇಖರಣೆ: ಪರಿಶೀಲನೆ ವೇಳೆ ವೃದ್ಧ ದಂಪತಿ ಪರಾರಿ!
ಗ್ರಾಮದ ನಾಗರಾಜ(60) ಎಂಬುವವರ ಮನೆಯಲ್ಲಿ ಜಿಂಕೆ ಮಾಂಸ ಶೇಖರಿಸಿರುವ ಖಚಿತ ಮಾಹಿತಿ ಮೇರೆಗೆ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವಲಯ ಅರಣ್ಯಾಧಿಕಾರಿ ಕಾಂತರಾಜು ನೇತೃತ್ವದಲ್ಲಿ ದಾಳಿ ನಡೆಸಿ 4 ಕೆಜಿ ಜಿಂಕೆ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಈ ವೇಳೆ, ನಾಗರಾಜ ತನ್ನ ಪತ್ನಿಯೊಂದಿಗೆ ಪರಾರಿಯಾಗಿದ್ದಾನೆ.
ವನ್ಯ ಜೀವಿ ಸಂರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ವಶಪಡಿಸಿಕೊಂಡ ಜಿಂಕೆ ಮಾಂಸವನ್ನು ನ್ಯಾಯಾಲಯದ ಅಧಿಕಾರಿಗಳು ನಾಶಪಡಿಸಿದ್ದಾರೆ. ಪರಾರಿಯಾದ ದಂಪತಿ ಪತ್ತೆಗೆ ಬಲೆ ಬೀಸಲಾಗಿದೆ.