ಚಾಮರಾಜನಗರ: ಗಾಂಜಾ ಸಂಗ್ರಹದ ಖಚಿತ ಮಾಹಿತಿ ಮೇರೆಗೆ ಸೆನ್ ಹಾಗೂ ಬಂಡೀಪುರ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ ವೇಳೆ ಮಾಂಸ, ಪ್ರಾಣಿ ಉಗುರುಗಳು ಪತ್ತೆಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿ ಗ್ರಾಮದಲ್ಲಿ ನಡೆದಿದೆ.
ಶಿವನಾಗಶೆಟ್ಟಿ (34) ಬಂಧಿತ ಆರೋಪಿ. ಈತನ ಮನೆಯಲ್ಲಿ ಗಾಂಜಾ ಇದೆ ಎಂಬ ಶಂಕೆ ಮೇಲೆ ದಾಳಿ ಮಾಡಲಾಗಿತ್ತು. ಆದ್ರೆ 6 ಗಾಂಜಾ ಗಿಡದ ಜೊತೆಗೆ 05 ಕೆಜಿಯಷ್ಟು ಜಿಂಕೆ ಮಾಂಸ ಕೂಡ ಪತ್ತೆಯಾಗಿದೆ.