ಚಾಮರಾಜನಗರ: ಜಿಂಕೆ ಬೇಟೆಯಾಡಿ ಮಾಂಸ ಮಾರಾಟ ಮಾಡಲು ಕೊಂಡೊಯ್ಯುವಾಗ ವ್ಯಕ್ತಿಯನ್ನು ಅರಣ್ಯ ಇಲಾಖೆ ಬಂಧಿಸಿರುವ ಘಟನೆ ಹನೂರು ತಾಲೂಕಿನ ಗೋಪಿನಾಥಂನ ಪರೇಕಟ್ಟು ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಜಿಂಕೆ ಮಾಂಸ ಮಾರಾಟ ಯತ್ನ; 25 ಕೆಜಿ ಮಾಂಸದೊಂದಿಗೆ ತಮಿಳುನಾಡು ವ್ಯಕ್ತಿ ಬಂಧನ - ಜಿಂಕೆ ಬೇಟೆಯಾಡಿ ಮಾಂಸವನ್ನು ಮಾರಾಟ
ಜಿಂಕೆ ಬೇಟೆಯಾಡಿ ಮಾಂಸ ಮಾರಾಟಕ್ಕೆ ಯತ್ನಿಸಿದ ತಮಿಳುನಾಡು ಮೂಲದ ವ್ಯಕ್ತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿರುವ ಘಟನೆ ನಡೆದಿದೆ.

ಜಿಂಕೆ ಮಾಂಸ ಮಾರಾಟ
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಅಂಚಟ್ಟಿ ತಾಲೂಕಿನ ನಟಾರಪಾಳ್ಯ ಗ್ರಾಮದ ನಿವಾಸಿ ಶಕ್ತಿ ಬಿನ್ ಗೋಪಾಲ ಬಂಧಿತ ಆರೋಪಿ. ವ್ಯಕ್ತಿಯೊಬ್ಬ ಜಿಂಕೆ ಮಾಂಸ ಮಾರಾಟ ಮಾಡಲು ಗೋಪಿನಾಥಂ ಕಡೆಗೆ ಬರುತ್ತಿರುವ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಸದ್ಯ, 25 ಕೆಜಿ ಜಿಂಕೆ ಮಾಂಸ, ಒಂದು ಬೈಕ್, ಎರಡು ಚೂರಿ, ಒಂದು ಮೊಬೈಲ್, ಒಂದು ನಾಡ ಬಂದೂಕು, ಒಂದು ಬ್ಯಾಟರಿ ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.