ಕರ್ನಾಟಕ

karnataka

ETV Bharat / state

ಡಿ. 5ರಂದು ರಾಜ್ಯ ಬಂದ್: 4ರಂದು ಚಾಮರಾಜನಗರ-ತಮಿಳುನಾಡು ಗಡಿ ಬಂದ್​​! - Srinivasa Gowda

ಮರಾಠ ಅಭಿವೃದ್ಧಿ ನಿಗಮ‌ ವಿರೋಧಿಸಿ ರಾಜ್ಯ ಬಂದ್​ಗೆ ಬೆಂಬಲಿಸಿ ಚಾಮರಾಜನಗರ-ತಮಿಳುನಾಡು ಗಡಿಗಳನ್ನು ಬಂದ್ ಮಾಡಲು ಕನ್ನಡಪರ ಸಂಘಟನೆಗಳು ನಿರ್ಧರಿಸಿರುವುದಾಗಿ ಕನ್ನಡಪರ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ತಿಳಿಸಿದ್ದಾರೆ.

Chamarajanagar
ಚಾಮರಾಜನಗರ

By

Published : Nov 28, 2020, 5:32 PM IST

ಚಾಮರಾಜನಗರ:ಮರಾಠ ಅಭಿವೃದ್ಧಿ ನಿಗಮ‌ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ರಾಜ್ಯ ಬಂದ್​ಗೆ ಪೂರಕವಾಗಿ ಡಿ. 4ರಂದು ಚಾಮರಾಜನಗರ-ತಮಿಳುನಾಡು ಗಡಿಯನ್ನು ಬಂದ್ ಮಾಡಲು ಕನ್ನಡಪರ ಸಂಘಟನೆಗಳು ಉದ್ದೇಶಿಸಿವೆ‌.

ಕನ್ನಡಪರ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ

ಈ ಕುರಿತು ಕನ್ನಡಪರ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ರಾಜ್ಯ ಬಂದ್​ಗೆ ಬೆಂಬಲಿಸಿ ತಮಿಳುನಾಡು ಗಡಿಗಳನ್ನು ಬಂದ್ ಮಾಡಲು ಕನ್ನಡಪರ ಸಂಘಟನೆಗಳು ನಿರ್ಧರಿಸಿದ್ದು, ವಾಟಾಳ್ ನಾಗರಾಜ್ ಬರುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.

ಈಗಾಗಲೇ ಅತ್ತಿಬೆಲೆ, ಬೆಳಗಾವಿಯಲ್ಲಿ ಗಡಿ ಬಂದ್ ಮಾಡಿ ನಿರಂತರ ಹೋರಾಟ ಮಾಡುತ್ತಿದ್ದು, ನಿಗಮ ರಚನೆ ಆದೇಶ ಹಿಂಪಡೆಯುವ ತನಕ ಹೋರಾಡುತ್ತೇವೆ. ಕರ್ನಾಟಕವನ್ನು‌ ಒಡೆಯುವ ಕೆಲಸವನ್ನು ಸರ್ಕಾರ ಮಾಡಬಾರದು. ರಾಜ್ಯ, ಭಾಷೆ, ಸಂಸ್ಕೃತಿ ಬಗ್ಗೆ ಗೌರವವಿದ್ದರೆ ಈ ನಿಗಮದ ಆದೇಶ ವಾಪಸ್ ಪಡೆಯಬೇಕೆಂದು ಅವರು‌ ಆಗ್ರಹಿಸಿದರು.

ABOUT THE AUTHOR

...view details