ಚಾಮರಾಜನಗರ: ಋಣಮುಕ್ತ ಕಾಯ್ದೆ ಮೂಲಕ ಅರ್ಜಿ ಸಲ್ಲಿಸಲು ತಾಲೂಕು ಕಚೇರಿಯಲ್ಲಿ ಉಚಿತ ಫಾರಂ ನೀಡಲಾಗುತ್ತಿದ್ದು ಅಗತ್ಯವಿರುವವರು ಪಡೆದುಕೊಂಡು ಉಪಯೋಗ ಪಡೆದುಕೊಳ್ಳಬೇಕೆಂದು ಉಪವಿಭಾಗಾಧಿಕಾರಿ ನಿಖಿತಾ ಚಿನ್ನಸ್ವಾಮಿ ಹೇಳಿದರು.
ಋಣಮುಕ್ತ ಕಾಯ್ದೆ ಅರ್ಜಿಗೆ ಮಧ್ಯವರ್ತಿಗಳು ಬೇಡ, ತಾಲೂಕು ಕಚೇರಿಯಲ್ಲಿ ಸಿಗಲಿದೆ ಉಚಿತ ಅರ್ಜಿ - ಉಪವಿಭಾಗಾಧಿಕಾರಿ ನಿಖಿತಾ ಚಿನ್ನಸ್ವಾಮಿ
ಋಣಮುಕ್ತ ಕಾಯ್ದೆ ಮೂಲಕ ಅರ್ಜಿ ಸಲ್ಲಿಸಲು ತಾಲ್ಲೂಕು ಕಚೇರಿಯಲ್ಲಿ ಉಚಿತ ಫಾರಂ ನೀಡಲಾಗುತ್ತಿದ್ದು ಅಗತ್ಯವಿರುವವರು ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಉಪವಿಭಾಗಾಧಿಕಾರಿ ನಿಖಿತಾ ಚಿನ್ನಸ್ವಾಮಿ ಹೇಳಿದರು.
![ಋಣಮುಕ್ತ ಕಾಯ್ದೆ ಅರ್ಜಿಗೆ ಮಧ್ಯವರ್ತಿಗಳು ಬೇಡ, ತಾಲೂಕು ಕಚೇರಿಯಲ್ಲಿ ಸಿಗಲಿದೆ ಉಚಿತ ಅರ್ಜಿ](https://etvbharatimages.akamaized.net/etvbharat/prod-images/768-512-4249947-thumbnail-3x2-nikitha.jpg)
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಖಿತಾ ಚಿನ್ನಸ್ವಾಮಿ, ಋಣಮುಕ್ತ ಕಾಯ್ದೆಯಡಿ ಅರ್ಜಿ ಸಲ್ಲಿಸುವವರು ಹೊರಗೆ ಮಧ್ಯವತಿ೯ಗಳು ನೀಡುವ ಫಾರಂ ಕೊಂಡುಕೊಳ್ಳದೆ, ಕಚೇರಿಯಲ್ಲೇ ಉಚಿತವಾಗಿ ನೀಡುವ ಅಜಿ೯ಯನ್ನು ಪಡೆದುಕೊಳ್ಳಬೇಕು. ಜು. 23 ರಿಂದ ಕಾಯ್ದೆ ಅನುಷ್ಠಾನಕ್ಕೆ ಬಂದಿದ್ದು ಅ. 22ರವರೆಗೆ ಅರ್ಜಿ ಸ್ವೀಕರಿಸಲಾಗುತ್ತದೆಯೆಂದು ತಿಳಿಸಿದರು.
ದುರ್ಬಲ ವರ್ಗದವರು, ಸಣ್ಣ ಹಿಡುವಳಿದಾರರು (4.94 ಎಕರೆಗಿಂತ ಕಡಿಮೆ ಜಮೀನು ಹೊಂದಿರುವವರು) ಹಾಗೂ ಭೂರಹಿತರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ನಮೂನೆ 2ರ ಅರ್ಜಿಗಳನ್ನು ಉಚಿತವಾಗಿ ಪಡೆದು ಸಲ್ಲಿಸಬೇಕು, ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆ ಸಂಪಕಿ೯ಸಬಹುದೆಂದು ಮಾಹಿತಿ ನೀಡಿದರು.