ಕೊಳ್ಳೇಗಾಲ: ನಿನ್ನೆ ತಡರಾತ್ರಿ ಸುರಿದ ಭಾರೀ ಮಳೆಗೆ ಕೊಟ್ಟಿಗೆ ಕುಸಿದು 4 ಆಡಿನ ಮರಿಗಳು ಮೃತಪಟ್ಟಿರುವ ಘಟನೆ ತಾಲೂಕಿನ ತೆಳ್ಳನೂರು ಗ್ರಾಮದಲ್ಲಿ ನಡೆದಿದೆ.
ಕೊಳ್ಳೇಗಾಲ: ಭಾರೀ ಮಳೆಗೆ ಕೊಟ್ಟಿಗೆ ಕುಸಿದು 4 ಮೇಕೆ ಮರಿ ಸಾವು - kollegala in Chamarajanagar District
ಭಾರೀ ಮಳೆ, ಗಾಳಿಗೆ ಕೊಟ್ಟಿಗೆ ಕುಸಿದು ಬಿದ್ದು 4 ಮೇಕೆ ಮರಿಗಳು ಮೃತಪಟ್ಟಿರುವ ಘಟನೆ ತೆಳ್ಳನೂರು ಗ್ರಾಮದಲ್ಲಿ ನಡೆದಿದೆ.
4 ಮೇಕೆ ಮರಿ ಸಾವು
ವೆಂಕಟಾಚಲ ಎಂಬುವವರಿಗೆ ಸೇರಿದ ಮೇಕೆ ಮರಿಗಳು ಇವಾಗಿವೆ. ಸ್ಥಳೀಯರ ಸಹಾಯದಿಂದ ಕುಸಿದ ಗೋಡೆಯ ಮಣ್ಣಿನ ಕೆಳಗೆ ಸಿಲುಕಿದ್ದ 4 ಮರಿಗಳ ಪೈಕಿ 2 ಮರಿಗಳ ಕಳೇಬರ ದೊರಕಿದ್ದು, ಇನ್ನೆರಡು ಮರಿಗಳು ಮಣ್ಣಿನ ಕೆಳಗೆ ಸಿಲುಕಿವೆ. ಸುಮಾರು 35 ಸಾವಿರ ರೂ. ನಷ್ಟವಾಗಿದೆ ಎಂದು ವೆಂಕಟಾಚಲ ತಿಳಿಸಿದ್ದಾರೆ.
ಈ ಬಗ್ಗೆ ಗ್ರಾಮ ಲೆಕ್ಕಧಿಕಾರಿಗಳು ಹಾಗೂ ಪಶು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಸಂಬಂಧಪಟ್ಟ ಇಲಾಖೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.