ಚಾಮರಾಜನಗರ: ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ರೋಗಿ ಮೃತಪಟ್ಟಿದ್ದಾರೆ ಎನ್ನಲಾದ ಘಟನೆ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಹೇಶ್ ನಾಯಕ್ (36) ಮೃತರು. ಎದೆನೋವಿನಿಂದ ಬಳಲುತಿದ್ದ ಇವರು ಇಂದು ಬೆಳಗ್ಗೆ ತೆರಕಣಾಂಬಿ ಆಸ್ಪತ್ರೆಗೆ ಬಂದಿದ್ದರು. ಆದರೆ ಈ ವೇಳೆ ವೈದ್ಯರು, ಆ್ಯಂಬುಲೆನ್ಸ್ ಸಿಬ್ಬಂದಿ ಇರಲಿಲ್ಲ ಎನ್ನಲಾಗಿದೆ. ಸಕಾಲದಲ್ಲಿ ಚಿಕಿತ್ಸೆ ಸಿಕ್ಕಿದ್ದರೆ ಬದುಕುಳಿಯುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ ಕುಟುಂಬಸ್ಥರು, ಆಸ್ಪತ್ರೆ ಮುಂದೆ ಶವ ಇಟ್ಟು, ರಸ್ತೆ ತಡೆದು ಪ್ರತಿಭಟಿಸಿದರು.
ವೈದ್ಯರಿಲ್ಲದೆ ರೋಗಿ ಸಾವು ಆರೋಪ: ಸಂಬಂಧಿಕರಿಂದ ರಸ್ತೆ ತಡೆದು ಪ್ರತಿಭಟನೆ - ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮ
ಎದೆನೋವಿನಿಂದ ಬಳಲುತಿದ್ದ ವ್ಯಕ್ತಿಯೋರ್ವರು ಚಾಮರಾಜನಗರದ ತೆರಕಣಾಂಬಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸಕಾಲದಲ್ಲಿ ಚಿಕಿತ್ಸೆ ಸಿಗದಿರುವುದೇ ಘಟನೆಗೆ ಕಾರಣ ಎನ್ನುವುದು ಸಂಬಂಧಿಕರ ಆರೋಪ.

ರೋಗಿ ಸಾವು ಸಂಬಂಧಿಕರಿಂದ ಪ್ರತಿಭಟನೆ
ರೋಗಿ ಸಾವು: ಸಂಬಂಧಿಕರಿಂದ ಪ್ರತಿಭಟನೆ
Last Updated : Aug 7, 2022, 12:52 PM IST