ಚಾಮರಾಜನಗರ: ಮಹಾಮಳೆಗೆ ಜಿಲ್ಲೆಯಲ್ಲಿ ನಾಲ್ಕನೇ ಸಾವು ಸಂಭವಿಸಿದ್ದು, ಮಳೆ ನೀರಿನಲ್ಲಿ ಕೊಚ್ಚಿಹೋದ ವ್ಯಕ್ತಿಯೋರ್ವ ಶವವಾಗಿ ಪತ್ತೆಯಾಗಿರುವ ಘಟನೆ ಯಳಂದೂರು ತಾಲೂಕಿನ ಬೂದಿತಿಟ್ಟು ಗ್ರಾಮದ ಜಮೀನೊಂದರಲ್ಲಿ ನಡೆದಿದೆ.
ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ಮಂಜು(45) ಮೃತರು. ಕಳೆದ ಮಂಗಳವಾರ ಅಂಬಳೆ ಗ್ರಾಮದಿಂದ ತಮ್ಮ ಹೆಂಡತಿ ಊರು ಬೂದಿತಿಟ್ಟು ಗ್ರಾಮಕ್ಕೆ ತೆರಳುವಾಗ ಸುವರ್ಣಾವತಿ ನದಿ ನೀರಿನಲ್ಲಿ ಮಂಜು ಕೊಚ್ಚಿಕೊಂಡು ಹೋಗಿದ್ದರು. ನದಿ ನೀರಿನ ಹರಿವು ಕಡಿಮೆಯಾದ ಹಿನ್ನೆಲೆಯಲ್ಲಿ ನದಿ ಬಳಿಯ ಕಬ್ಬಿನ ಗದ್ದೆಯಲ್ಲಿ ಮೃತದೇಹ ಪತ್ತೆಯಾಗಿದೆ.