ಚಾಮರಾಜನಗರ:ಎರಡು ದಿನಗಳಿಂದ ಮೃತದೇಹವನ್ನು ಪಡೆಯಲು ಮೃತನ ತಾಯಿ ಹಾಗೂ ಹೆಂಡತಿ ನಡುವೆ ನಡೆಯುತ್ತಿದ್ದ ಗಲಾಟೆ ಪೊಲೀಸರ ಸರ್ಕಸ್ಸಿನಿಂದ ರಾಜಿಯಾದ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.
ಮೃತದೇಹಕ್ಕಾಗಿ ತಾಯಿ-ಪತ್ನಿ ಸಂಘರ್ಷ: 2 ದಿನಗಳ ಬಳಿಕ ಸಮಸ್ಯೆಗೆ ಸಿಕ್ತು ಪರಿಹಾರ - ಚಾಮರಾಜನಗರದಲ್ಲಿ ಮೃತದೇಹದ ಸಮಸ್ಯೆ ಬಗೆಹರಿಸಿದ ಪೊಲೀಸರು
ಮೃತದೇಹ ಪಡೆಯಲು ತಾಯಿ ಮತ್ತು ಪತ್ನಿ ನಡೆಸುತ್ತಿದ್ದ ಕಿತ್ತಾಟ ಕೊನೆಗೂ ಮುಕ್ತಾಯಗೊಂಡಿದೆ. ಪೊಲೀಸರ ಮಧ್ಯಪ್ರವೇಶದಿಂದಾಗಿ ಮೃತದೇಹದ ಸಮಸ್ಯೆ ಬಗೆಹರಿಯಿತು.
![ಮೃತದೇಹಕ್ಕಾಗಿ ತಾಯಿ-ಪತ್ನಿ ಸಂಘರ್ಷ: 2 ದಿನಗಳ ಬಳಿಕ ಸಮಸ್ಯೆಗೆ ಸಿಕ್ತು ಪರಿಹಾರ Dead body issue solved by police, Deadbody issue solved by police in Chamarajanagar, Chamarajanagar news, ಮೃತದೇಹದ ಸಮಸ್ಯೆ ಬಗೆಹರಿಸಿದ ಪೊಲೀಸರು, ಚಾಮರಾಜನಗರದಲ್ಲಿ ಮೃತದೇಹದ ಸಮಸ್ಯೆ ಬಗೆಹರಿಸಿದ ಪೊಲೀಸರು, ಚಾಮರಾಜನಗರ ಸುದ್ದಿ,](https://etvbharatimages.akamaized.net/etvbharat/prod-images/768-512-14057848-661-14057848-1640937051444.jpg)
ಗುಂಡ್ಲುಪೇಟೆಯ ಹಿರಿಯ ವಕೀಲ ಪಾಪಣ್ಣಶೆಟ್ಟಿ ಕಳೆದ ಎರಡು ದಿನಗಳ ಹಿಂದೆ ಮೃತಪಟ್ಟಿದ್ದರು. ಆದರೆ, ಮೃತದೇಹ ಅಂತ್ಯಸಂಸ್ಕಾರಕ್ಕೆ ತಮಗೇ ನೀಡಬೇಕೆಂದು ಮೃತರ ತಾಯಿ ಹಾಗೂ ಪತ್ನಿ ಶವಾಗಾರದ ಮುಂದೆಯೇ ಕಿತ್ತಾಟ ನಡೆಸಿದ್ದರು. ಹೀಗಾಗಿ ಪಾಪಣ್ಣಶೆಟ್ಟಿಯ ಮೃತದೇಹವನ್ನು ಚಾಮರಾಜನಗರ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ ಪೊಲೀಸರು ಸಂಧಾನದ ಕಾರ್ಯಕ್ಕೆ ನಿಂತಿದ್ದರು.
ಸತತ ಎರಡು ದಿನಗಳ ಬಳಿಕ ರಾಜಿಯಾಗಿದ್ದು, ಪತ್ನಿ ಮಹಾದೇವಮ್ಮ ಅವರಿಗೆ ಮೃತದೇಹ ಕೊಡಲು ತಾಯಿ ಹಾಗೂ ಸಂಬಂಧಿಕರು ನಿರ್ಧರಿಸಿದ್ದಾರೆ. ಪಾಪಣಶೆಟ್ಟಿ ಎರಡು ಮದುವೆಯಾಗಿದ್ದು, ಎರಡನೇ ಹೆಂಡತಿ ನಮಿತಾ ಆಕೆಯ ತಾಯಿಯೊಟ್ಟಿಗೆ ವಾಸವಾಗಿದ್ದಾರೆ. ಈ ಗಲಾಟೆ ಪ್ರಸಂಗಕ್ಕೆ ಅವರೇ ಕಾರಣರಾಗಿದ್ದಾರೆ ಎನ್ನಲಾಗಿದೆ.