ಚಾಮರಾಜನಗರ: ಅರೆಬೆತ್ತಲೆಯಾಗಿ ವ್ಯಕ್ತಿಯೊಬ್ಬನ ಶವ ಚಾಮರಾಜನಗರ ತಾಲೂಕಿನ ಕೋಡಿಮೋಳೆ ಗ್ರಾಮದ ಕೆರೆಯಲ್ಲಿ ಪತ್ತೆಯಾಗಿದೆ. ಮೃತನಿಗೆ ಅಂದಾಜು 35-39 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಚಾಕು ಇಲ್ಲವೇ ಹರಿತವಾದ ಆಯುಧದಿಂದ ಕತ್ತು ಕೊಯ್ದು ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಚಾಮರಾಜನಗರ: ಕೆರೆ ಬಳಿ ಅರೆಬೆತ್ತಲೆ ಸ್ಥಿತಿಯಲ್ಲಿ ಅನಾಥ ಶವ ಪತ್ತೆ, ಕೊಲೆ ಶಂಕೆ - dead body found near the lake murder is suspected in Chamarajanagar
ಚಾಮರಾಜನಗರ ತಾಲೂಕಿನ ಕೋಡಿ ಮೋಳೆ ಗ್ರಾಮದ ಕೆರೆಯಲ್ಲಿ ಅಪರಿಚಿತ ಶವ ಒಂದು ಪತ್ತೆಯಾಗಿದೆ. ಪ್ರಕರಣವನ್ನು ಕೊಲೆ ಎಂದು ಶಂಕಿಸಲಾಗಿದೆ.
ಅನಾಥ ಶವ ಪತ್ತೆ
ಮೃತನ ಗುರುತು ಇನ್ನೂ ಪತ್ತೆಯಾಗಿಲ್ಲ. ಚಾಮರಾಜನಗರ ಪೂರ್ವ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣವನ್ನು ಕೊಲೆ ಎಂದು ಶಂಕಿಸಲಾಗಿದೆ.
ಇದನ್ನೂ ಓದಿ :ರಾಮಸೇನಾದ ಜಿಲ್ಲಾಧ್ಯಕ್ಷನಿಂದ ಪ್ರೇಯಸಿಯ ಕೊಲೆ ಯತ್ನ