ಚಾಮರಾಜನಗರ :ಪಾಲಾರ್ ನದಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಮೃತರನ್ನು ತಮಿಳುನಾಡಿನ ಗೋವಿಂದಪಾಡಿ ಗ್ರಾಮದ ರಾಜ (45) ಎಂದು ಗುರುತಿಸಲಾಗಿದೆ. ತಮಿಳುನಾಡು ಗಡಿಯಲ್ಲಿನ ಪಾಲರ್ ಚೆಕ್ಪೋಸ್ಟ್ ಸಮೀಪದ ಪಾಲರ್ ಎಂಬಲ್ಲಿ ಶವ ದೊರೆತಿದೆ.
ಸೇಲಂ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ತನಿಖೆ ಮುಂದುವರೆಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ಕಳ್ಳಬೇಟೆಗೆ ಬಂದವರಲ್ಲಿ ಈತನೂ ಸೇರಿದ್ದನೆಂಬ ಶಂಕೆ ವ್ಯಕ್ತವಾಗಿದೆ. ಕಳೆದ 14ರ ರಾತ್ರಿ ಬೇಟೆಯಾಡಲು ಬಂದಿದ್ದ ಅಪರಿಚಿತರಿಂದ ಅರಣ್ಯ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆದಿತ್ತು. ಆತ್ಮರಕ್ಷಣೆಗಾಗಿ ಅರಣ್ಯ ಸಿಬ್ಬಂದಿ ಕೂಡ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಈ ವೇಳೆ ಸ್ಥಳದಲ್ಲಿ ನಾಡ ಬಂದೂಕು, ಬೇಟೆಗಾರರು ತಲೆ ಮೇಲೆ ಅಳವಡಿಸಿಕೊಂಡಿದ್ದ ಕ್ಯಾಪ್ ಟಾರ್ಚ್ಗಳು, ಜಿಂಕೆ ಶವ ಪತ್ತೆಯಾಗಿದ್ದವು.