ಕೊಳ್ಳೇಗಾಲ(ಚಾಮರಾಜನಗರ) :ತಾಲೂಕಿನ ಸತ್ತೇಗಾಲ ಶಿವನ ಸಮುದ್ರ ಗ್ರಾಮದ ರಂಗನಾಥ ದೇವಸ್ಥಾನದ ಹಿಂಭಾಗ ಅಪರಿಚಿತ ವ್ಯಕ್ತಿಯು ಸಾವನ್ನಪ್ಪಿರುವ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿದೆ.
ಸುಮಾರು 75 ವಯಸ್ಸಿನ ವೃದ್ಧನ ಶವ ಇದಾಗಿದ್ದು. ಈತ ಕಳೆದ 5 ವರ್ಷದಿಂದ ರಂಗನಾಥನ ದೇವಸ್ಥಾನದ ಮುಂದೆಯೇ ಭಿಕ್ಷೆ ಬೇಡುತ್ತಿದ್ದ. ದೇವಾಲಯದ ಆಸುಪಾಸಿನಲ್ಲಿಯೇ ಜೀವನ ನಡೆಸುತ್ತಿದ್ದ. ಅಷ್ಟಾಗಿ ಯಾರ ಜೊತೆಯೂ ಮಾತನಾಡುತ್ತಿರಲಿಲ್ಲ.