ಚಾಮರಾಜನಗರ: ಬೋರಲು ಬಿದ್ದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾದ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಹಿರಿಕಾಟಿಯಲ್ಲಿ ನಡೆದಿದೆ.
ಬೋರಲು ಬಿದ್ದ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ.. ಕೊಲೆ ನಡೆದಿರುವ ಶಂಕೆ - ಚಾಮರಾಜನಗರದಲ್ಲಿ ಅಪರಿಚಿತ ಶವ
ಚಾಮರಾಜನಗರದಲ್ಲಿ ಅಪರಿಚಿತ ಶವವೊಂದು ಬೋರಲು ಬಿದ್ದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.
ಕೊಲೆ ಶಂಕೆ
ವ್ಯಕ್ತಿಯ ವಿವರ ಇನ್ನೂ ಪತ್ತೆಯಾಗಿಲ್ಲ. ಮೃತಪಟ್ಟವನು ಮಧ್ಯವಯಸ್ಕನಾಗಿದ್ದು ತಲೆಮೇಲೆ ಕಲ್ಲು ಹಾಕಿ ಕೊಲೆ ಮಾಡಿರುವ ಶಂಕೆ ಮೇಲ್ನೋಟಕ್ಕೆ ವ್ಯಕ್ತವಾಗಿದೆ.ಶವದ ಸಮೀಪದಲ್ಲೇ ಬಟ್ಟೆ ತುಂಬಿದ ಬ್ಯಾಗ್, ವಾಟರ್ ಬಾಟೆಲ್, ಮಹಿಳೆಯ ಚಪ್ಪಲಿ ಬಿದ್ದಿದ್ದು ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ತನಿಖೆ ಕೈಗೊಂಡಿದ್ದಾರೆ.
ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.