ಚಾಮರಾಜನಗರ:ಎರಡು ದಿನಗಳಿಂದ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯು ಶವವಾಗಿ ಮನೆಯ ಹಿಂಭಾಗದ ಶೌಚಗುಂಡಿಯಲ್ಲಿ ಪತ್ತೆಯಾಗಿರುವ ಘಟನೆ ಹನೂರು ತಾಲೂಕಿನ ಗುಂಡಿಮಾಳ ಗ್ರಾಮದಲ್ಲಿ ನಡೆದಿದೆ.
ಗುಂಡಿಮಾಳ ಗ್ರಾಮದ ರಾಜಶೇಖರಮೂರ್ತಿ (42) ಮೃತ ದುರ್ದೈವಿ. ತನ್ನ ತಂದೆಯು ಎರಡು ದಿನಗಳಿಂದ ನಾಪತ್ತೆಯಾಗಿದ್ದಾರೆಂದು ಭಾನುವಾರವಷ್ಟೇ ರಾಜಶೇಖರ ಅವರ ಮಗ ಹನೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಸೋಮವಾರ ಸಂಜೆ ಹೊತ್ತಿನಲ್ಲಿ ಶೌಚಗುಂಡಿಯಿಂದ ದುರ್ವಾಸನೆ ಬರುತ್ತಿದ್ದನ್ನು ಗಮನಿಸಿ, ಗುಂಡಿಯ ಮುಚ್ಚಳ ತೆರೆದಾಗ ಶವ ಇರುವುದು ಪತ್ತೆಯಾಗಿದೆ.