ಚಾಮರಾಜನಗರ: ಪ್ರೀತಿ ಪ್ರೇಮ ಎಂದು ಮಗಳು ಯುವಕನೊಟ್ಟಿಗೆ ಓಡಿ ಹೋಗಿದ್ದರಿಂದ ಮನನೊಂದ ಯುವತಿಯ ತಂದೆ-ತಾಯಿ, ಮನೆಬಿಟ್ಟು ನಾಪತ್ತೆಯಾಗಿರುವ ಪ್ರಕರಣ ಯಳಂದೂರು ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಕಳೆದ 5 ದಿನಗಳ ಹಿಂದೆ ಕಾಲೇಜಿಗೆ ತೆರಳಿದ್ದ ಮಗಳು ಯುವಕನೊಟ್ಟಿಗೆ ಪರಾರಿಯಾದ ಬಳಿಕ ಈ ಘಟನೆ ನಡೆದಿದೆ.
ಯುವಕನೊಟ್ಟಿಗೆ ಮಗಳು ಪರಾರಿ.. ಮನನೊಂದು ಮನೆಯನ್ನೇ ತೊರೆದ್ರು ತಂದೆ-ತಾಯಿ - Daughter who left home with a young man
ಮಗಳು ಪ್ರೀತಿಸಿದ ಯುವಕನೊಂದಿಗೆ ಪರಾರಿ ಆಗಿದ್ದರಿಂದ ಮನನೊಂದ ಆಕೆಯ ಪೋಷಕರು ಮನೆಬಿಟ್ಟು ಕಾಣೆಯಾಗಿದ್ದಾರೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಳ್ಳೇಗಾಲ ಗ್ರಾಮಾಂತರ ಠಾಣೆ
ಇದರಿಂದ ಆಘಾತಕ್ಕೊಳಗಾಗಿದ್ದ ದಂಪತಿ ಮನೆ ಬಿಟ್ಟು ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ. ದಂಪತಿ ಮತ್ತು ಅವರ ಮಗಳು ಕಾಣೆಯಾದ ಬಗ್ಗೆ ಸಂಬಂಧಿಕರೊಬ್ಬರು ಕೊಳ್ಳೇಗಾಲ ಗ್ರಾಮಾಂತರ ಠಾಣೆಗೆ ದೂರು ಕೊಟ್ಟಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ:ಕೊಲೆ ಯತ್ನ: ಪತಿ ವಿರುದ್ಧ ದೂರು ನೀಡಿದ ಮಹಾನಗರ ಪಾಲಿಕೆ ಸದಸ್ಯೆ!