ಚಾಮರಾಜನಗರ: ಬಹಿರಂಗ ಪ್ರಚಾರ ಅಂತ್ಯಕ್ಕೆ ಎರಡು ದಿನ ಬಾಕಿ ಇದ್ದು ಚಾಮರಾಜನಗರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುವ ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಪರ ಇಂದು ಪುತ್ರಿ ಅನುಪಮಾ ರೋಡ್ ಶೋ ನಡೆಸಿ ಮತಬೇಟೆ ನಡೆಸಿದರು. ಚಾಮರಾಜನಗರದ ಸಂತೇಮರಹಳ್ಳಿ ವೃತ್ತ, ಡಿವಿಏಷನ್ ರಸ್ತೆ, ಜೋಡಿ ರಸ್ತೆ, ರಾಮಸಮುದ್ರ, ಚಿಕ್ಕಂಗಡಿ ಬೀದಿ, ದೊಡ್ಡಂಗಡಿ ಬೀದಿ, ಷರೀಪ್ ವೃತ್ತಗಳಲ್ಲಿ ತಂದೆ ವಾಟಾಳ್ ಜೊತೆಗೂಡಿ ರೋಡ್ ಶೋ ನಡೆಸಿ ವಾಟಾಳ್ ನಾಗರಾಜ್ ಅವರಿಗೆ ಮತ ಹಾಕುವಂತೆ ಮನವಿ ಮಾಡಿದರು.
ನನ್ನ ತಂದೆ ಕೇವಲ ರಾಜಕಾರಣಿ ಅಲ್ಲ ಪ್ರಚಂಡ ಹೋರಾಟಗಾರ, ಉತ್ತಮರನ್ನು ಆಯ್ಕೆ ಮಾಡಬೇಕು ಎಂದು ಜನರು ಹೇಳ್ತಾರೆ, ವಾಟಾಳ್ ನಾಗರಾಜ್ ಅವರಿಗಿಂತ ಉತ್ತಮ ಅಭ್ಯರ್ಥಿ ಸಿಗುವುದಿಲ್ಲ, ಜನರು ಈ ಬಾರಿ ವಾಟಾಳ್ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ನೂರಕ್ಕೆ ನೂರರಷ್ಠು ಗೆಲ್ಲುವ ಅರ್ಹತೆಯುಳ್ಳ ಅಭ್ಯರ್ಥಿ ಎಂದರೆ ನಮ್ಮ ತಂದೆ ವಾಟಾಳ್ ನಾಗರಾಜ್, ದಿನಿನಿತ್ಯ ಹೋರಾಟ ಮಾಡುವ ಪ್ರಚಂಡ ಹೋರಾಟಗಾರ, ಒಳ್ಳೆಯ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ಜನರ ಮೇಲಿದ್ದು, ಚಾಮರಾಜನಗರ ಅಭಿವೃದ್ಧಿಗಾಗಿ ಜೀವನವನ್ನೇ ವಾಟಾಳ್ ತ್ಯಾಗ ಮಾಡಿದ್ದಾರೆ. ಹೋರಾಗಾರರನ್ನು ಗೆಲ್ಲಿಸುವ ಅವಕಾಶ, ಜವಾಬ್ದಾರಿ ಎರಡೂ ಜನರಿಗೆ ಈ ಬಾರಿ ಸಿಕ್ಕಿದೆ ಎಂದರು.