ಚಾಮರಾಜನಗರ:ಹಸಿರು ಕರ್ನಾಟಕ ಬ್ಯ್ರಾಂಡ್ ಅಂಬಾಸಿಡರ್ ಆಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ಮಲೆಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ಕಳ್ಳಬೇಟೆ ತಡೆ ಶಿಬಿರಕ್ಕೆ ನಿನ್ನೆ ಹಾಸ್ಯ ನಟ ಚಿಕ್ಕಣ್ಣ ಅವರೊಂದಿಗೆ ಭೇಟಿ ನೀಡಿದ್ದರು.
ಚಾಮರಾಜನಗರದ ಕಳ್ಳಬೇಟೆ ತಡೆ ಶಿಬಿರಕ್ಕೆ ನಟ ದರ್ಶನ್ ಭೇಟಿ - comedy actor Chikkanna
ನಟ ದರ್ಶನ್ ಹಸಿರು ಕರ್ನಾಟಕ ಬ್ಯ್ರಾಂಡ್ ಅಂಬಾಸಿಡರ್ ಕೂಡಾ ಆಗಿದ್ದು ನಿನ್ನೆ ಚಾಮರಾಜನಗರ ಕೊಳ್ಳೇಗಾಲ ಬಫರ್ ಝೋನಿನ ದೊಡ್ಡಮಕ್ಕಳ್ಳಿಯ ಕಳ್ಳಬೇಟೆ ತಡೆ ಶಿಬಿರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕೊಳ್ಳೇಗಾಲ ಬಫರ್ ಝೋನಿನ ದೊಡ್ಡಮಕ್ಕಳ್ಳಿಯ ಕಳ್ಳಬೇಟೆ ತಡೆ ಶಿಬಿರಕ್ಕೆ ದರ್ಶನ್ ಭೇಟಿ ನೀಡಿ, ಅಲ್ಲಿನ ವಾಚರ್ಗಳ ಕಷ್ಟ-ಸುಖ ಆಲಿಸಿದ್ದಾರೆ. ವಾಚರ್ಗಳಿಗೆ ಸಹಾಯಹಸ್ತ ನೀಡುವ ಭರವಸೆ ನೀಡಿರುವ ದರ್ಶನ್, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಂತೆ ಮನವಿ ಮಾಡಿದ್ದಾರೆ ಎಂದು ಡಿಎಫ್ಒ ಏಡುಕುಂಡಲು ತಿಳಿಸಿದ್ದಾರೆ.
ಇಷ್ಟು ಮಾತ್ರವಲ್ಲ, ಅರಣ್ಯ ಕೃಷಿಗೆ ಪ್ರೋತ್ಸಾಹಿಸುವ ಯೋಜನೆಗೆ ದರ್ಶನ್ ಗಿಡನೆಟ್ಟು ಸಾಂಕೇತಿಕವಾಗಿ ಚಾಲನೆ ನೀಡಿದ್ದಾರೆ. ರೈತರು ಅರಣ್ಯ ಕೃಷಿಯತ್ತ ಒಲವು ಬೆಳೆಸಿಕೊಳ್ಳಲು ಇಲಾಖೆ ಪ್ರೋತ್ಸಾಹಧನ ನೀಡುವ ಯೋಜನೆ ಇದಾಗಿದೆ. ದರ್ಶನ್ ತಾವು ತೆಗೆದ ಫೋಟೋಗಳನ್ನು ಮಾರಾಟ ಮಾಡಿ ಬಂದ ಹಣವನ್ನು ವಾಚರ್ಗಳ ನೆರವಿಗೆ ನೀಡಿದ್ದರು.