ಚಾಮರಾಜನಗರ: ದರ್ಶನ್ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿರುವ ನಟ. ಅಭಿಮಾನಿಗಳು ತಪ್ಪೆಸಗಿದಾಗ ಅವರನ್ನು ತಿದ್ದುವ ಕೆಲಸವನ್ನೂ ಅವರು ಮಾಡುತ್ತಿರುತ್ತಾರೆ. ಇದಕ್ಕೊಂದು ಉದಾಹರಣೆ ಭಾನುವಾರ ನಡೆದ ಘಟನೆ.
'ರೋಡಲ್ಲಿ ಏನ್ ಆಟ ಆಡ್ತಿದೀರಾ...?' ವಾಹನ ಚೇಸ್ ಮಾಡ್ತಿದ್ದ ಫ್ಯಾನ್ಸ್ಗೆ ದರ್ಶನ್ ತರಾಟೆ - chamarajanagara latest news
ಮೂವರು ಬೈಕ್ ಸವಾರರು ಒಡೆಯರಪಾಳ್ಯ ರಸ್ತೆಯಲ್ಲಿ ಹೋಗುತ್ತಿದ್ದಾಗ ಅಚಾನಕ್ಕಾಗಿ ನಟ ದರ್ಶನ್ ಕೂಡ ಅದೇ ರಸ್ತೆಯಲ್ಲಿ ತೆರಳುತ್ತಿದ್ದರು. ಈ ವೇಳೆ ಅಭಿಮಾನಿಗಳು ಬೈಕ್ನಲ್ಲಿ ನಟನನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ.
ಮೂವರು ಬೈಕ್ ಸವಾರರು ಒಡೆಯರಪಾಳ್ಯ ರಸ್ತೆಯಲ್ಲಿ ತೆರಳುವಾಗ ಅಚಾನಕ್ಕಾಗಿ ದರ್ಶನ್ ಕೂಡ ಅದೇ ರಸ್ತೆಯಲ್ಲಿ ಬಂದಿದ್ದಾರೆ. ಈ ವೇಳೆ ಬೈಕ್ನಲ್ಲಿ ನಟನನ್ನು ಹಿಂಬಾಲಿಸಿಕೊಂಡು ಬಂದಿರುವ ಅಭಿಮಾನಿಗಳು ವೇಗದಲ್ಲಿ ಬೈಕ್ ಸವಾರಿ ಮಾಡಿಕೊಂಡು ಬರುತ್ತಿದ್ದರು. ಅಷ್ಟೇ ಅಲ್ಲದೇ, ವಾಹನ ಚಲಿಸುತ್ತಿರುವಾಗಲೇ ನೆಚ್ಚಿನ ನಟನ ವಿಡಿಯೋ ಮಾಡಲು ಮುಂದಾಗಿದ್ದಾರೆ.
ಇದನ್ನು ಗಮನಿಸಿದ ದರ್ಶನ್, "ಏ.. ರೋಡಲ್ಲಿ ಏನ್ ಆಟ ಆಡ್ತಾ ಇದೀರಾ, ಮೈಮೇಲೆ ಪ್ರಜ್ಞೆ ಬೇಡವಾ, ಮತ್ತೆ ಮತ್ತೆ ಬರ್ತಾ ಇದೀರಲ್ಲಾ, ಹೇಳಿದ್ರೂ ಕೇಳಲ್ವಾ?" ಎಂದು ಕ್ಲಾಸ್ ತೆಗೆದುಕೊಂಡರು. ಇವೆಲ್ಲವೂ ಬೈಕ್ ಹಿಂಬದಿ ಸವಾರ ಮಾಡಿರುವ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಈ ವೇಳೆ ದರ್ಶನ್ ಪತ್ನಿ ಕೂಡ ವಾಹನದಲ್ಲಿ ಇದ್ದರು.