ಕರ್ನಾಟಕ

karnataka

ETV Bharat / state

ಡೇಂಜರಸ್ ಆಟೋ ಸವಾರಿಗೆ ಬ್ರೇಕ್, ಚಾಲಕರಿಗೆ ದಂಡ: ಈಟಿವಿ ಭಾರತ ವರದಿ ಫಲಶ್ರುತಿ - ಚಾಮರಾಜನಗರ

ಚಾಮರಾಜನಗರದಲ್ಲಿ ಶಾಲಾ ಮಕ್ಕಳನ್ನು ಆಟೋ ಹಿಂದೆ ಕೂರಿಸಿಕೊಂಡು ವೇಗವಾಗಿ ಮತ್ತು ನಿರ್ಲಕ್ಷ್ಯದಿಂದ ಕರೆದೊಯ್ಯಲಾಗುತ್ತಿತ್ತು. ಈ ಬಗ್ಗೆ ಈ ಈಟಿವಿ ಭಾರತ 'ಶಾಲೆ ಆರಂಭವಾಗುತ್ತಿದ್ದಂತೆ ಶುರುವಾಯ್ತು ಡೇಂಜರಸ್ ಆಟೋ ಸವಾರಿ..‌‌ಮಕ್ಕಳ ಪ್ರಾಣಕ್ಕೆ ಬೆಲೆ ಇಲ್ವೇನ್ರಿ..!?' ಎಂಬ ಶೀರ್ಷಿಕೆಯಡಿ ಸುದ್ದಿ ಬಿತ್ತರಿಸಿತ್ತು.

Chamarajanagar
ಆಟೋ ಚಾಲಕರಿಗೆ ದಂಡ ವಿಧಿಸುತ್ತಿರುವ ಪೊಲೀಸರು

By

Published : Oct 27, 2021, 12:12 PM IST

ಚಾಮರಾಜನಗರ: ಶಾಲಾ ಮಕ್ಕಳನ್ನು ಅಪಾಯಕಾರಿಯಾಗಿ ಕೂರಿಸಿಕೊಂಡು ಆಟೋ ಚಲಾಯಿಸುತ್ತಿದ್ದ ಚಾಲಕರಿಗೆ ಕೊಳ್ಳೇಗಾಲದಲ್ಲಿ ಪೊಲೀಸರು ಎಚ್ಚರಿಕೆ ಕೊಟ್ಟು ದಂಡ ವಿಧಿಸಿದರು.

ಡೇಂಜರಸ್ ಆಟೋ ಸವಾರಿ: ಚಾಲಕರಿಗೆ ದಂಡ ವಿಧಿಸುತ್ತಿರುವ ಪೊಲೀಸರು

6-7 ಮಂದಿ ಕೂರುವ ಆಟೋದಲ್ಲಿ 12-14 ಮಕ್ಕಳನ್ನು ಕೂರಿಸಿಕೊಂಡು ಕೊಳ್ಳೇಗಾಲಕ್ಕೆ ಕರೆತರುತ್ತಿದ್ದ ಆಟೋಗಳ ವಿರುದ್ಧ ಕಾರ್ಯಾಚರಣೆ ನಡೆಸಿದ ಪೊಲೀಸರು 7ಕ್ಕೂ ಹೆಚ್ಚು ಆಟೋಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ದಾಖಲಾತಿ ಪರಿಶೀಲನೆ ನಡೆಸಿ, ಅಜಾಗರೂಕತೆ ಹಾಗು ವೇಗದ ಚಾಲನೆ ಮಾಡದಂತೆ ಎಚ್ಚರಿಕೆ ನೀಡಿ ದಂಡ ವಿಧಿಸಿದ್ದಾರೆ.

ಒಂದೂವರೆ ವರ್ಷಗಳ ಬಳಿಕ ಪ್ರಾಥಮಿಕ ಶಾಲೆ ಆರಂಭಗೊಳ್ಳುತ್ತಿದ್ದಂತೆ ಕುರಿಮಂದೆಯಂತೆ ಮಕ್ಕಳನ್ನು ತುಂಬಿಸಿಕೊಂಡು ಕೊಳ್ಳೇಗಾಲ ಭಾಗ ಮತ್ತು ಗುಂಡ್ಲುಪೇಟೆ ಭಾಗದಲ್ಲಿ ಆಟೋ ಚಾಲಕರು ಅಪಾಯಕ್ಕೆ ಎಡೆ ಮಾಡಿಕೊಡುತ್ತಿದ್ದರು.

ಇಂದುವಾಡಿ, ಮಧುವನಹಳ್ಳಿ- ಸತ್ತೇಗಾಲ, ನರೀಪುರ, ಉತ್ತಂಬಳ್ಳಿ,ಕುನಗಹಳ್ಳಿ, ಮುಡಿಗುಂಡ, ಸಿದ್ದಯ್ಯನಪುರದಿಂದ ಅಪಾಯಕ್ಕೆ ಆಹ್ವಾನ ನೀಡುವಂತೆ ಆಟೋ ಚಲಾಯಿಸುತ್ತಿದ್ದ ಬಗ್ಗೆ ಮಂಗಳವಾರ 'ಈಟಿವಿ ಭಾರತ' ವರದಿ ಬಿತ್ತರಿಸಿತ್ತು.

ಇದನ್ನೂ ಓದಿ:ಶಾಲೆ ಆರಂಭವಾಗುತ್ತಿದ್ದಂತೆ ಶುರುವಾಯ್ತು ಡೇಂಜರಸ್ ಆಟೋ ಸವಾರಿ..‌‌ಮಕ್ಕಳ ಪ್ರಾಣಕ್ಕೆ ಬೆಲೆ ಇಲ್ವೇನ್ರಿ..!?

ABOUT THE AUTHOR

...view details