ಚಾಮರಾಜನಗರ:ಟಿಸಿ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಓರ್ವ ಯುವಕ ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಮಸಗಪುರದಲ್ಲಿ ನಡೆದಿದೆ.
ಟಿಸಿ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶ: ಓರ್ವ ಸಾವು, ಮೂವರಿಗೆ ಗಾಯ - ವಿದ್ಯುತ್ ಪ್ರವಹಿಸಿ ಓರ್ವ ಯುವಕ ಮೃತ
ಮಲ್ಲಯ್ಯನಪುರ ಗ್ರಾಮದ ಮಹದೇವಯ್ಯ ಎಂಬವರ ಮಗ ಅಶೋಕ್(23) ಮೃತ ದುರ್ದೈವಿ. ವಿದ್ಯುತ್ ಗುತ್ತಿಗೆದಾರ ನಂಜುಂಡಸ್ವಾಮಿ ಎಂಬಾತ ಟಿಸಿ ದುರಸ್ತಿ, ಹೊಸ ಲೇನ್ ಸಂಪರ್ಕಕ್ಕೆಂದು ನಾಲ್ವರು ಯುವಕರನ್ನು ಕರೆದೊಯ್ದಿದ್ದಾಗ ವಿದ್ಯುತ್ ಪ್ರವಹಿಸಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ವಿದ್ಯುತ್ ಸ್ಪರ್ಶ
ಮಲ್ಲಯ್ಯನಪುರ ಗ್ರಾಮದ ಮಹದೇವಯ್ಯ ಎಂಬವರ ಮಗ ಅಶೋಕ್(23) ಮೃತ ದುರ್ದೈವಿ. ವಿದ್ಯುತ್ ಗುತ್ತಿಗೆದಾರ ನಂಜುಂಡಸ್ವಾಮಿ ಎಂಬಾತ ಟಿಸಿ ದುರಸ್ತಿ, ಹೊಸ ಲೇನ್ ಸಂಪರ್ಕಕ್ಕೆ ಎಂದು ನಾಲ್ವರು ಯುವಕರನ್ನು ಕರೆದೊಯ್ದಿದ್ದಾಗ ವಿದ್ಯುತ್ ಪ್ರವಹಿಸಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಮೂವರು ಯುವಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಾಮರಾಜನಗರದ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.