ಚಾಮರಾಜನಗರ :ಮಸಾಗಪುರ ಮತ್ತು ಕೆಲ್ಲಂಬಳ್ಳಿ ಚರ್ಚ್‌ನಲ್ಲಿ ಕೆಎಸ್‌ಡಿ ಬಿಷಪ್ ಮೋಹನ್ ಮನೋರಾಜ್ ಹಾಗೂ ತ್ಯಾಗರಾಜ್ ಅವರು ದಾಖಲಾತಿ ತಿರುಚಿ ಸರ್ಕಾರ ಹಾಗೂ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಮೈಸೂರು ವಿಭಾಗದ ಸಿಎಸ್‌ಐ ಟಿಎ ಫಲಾನುಭವಿಗಳ ಕಾರ್ಯದರ್ಶಿ ಸುಂದರ್ ಪ್ರೇಮ್‌ಕುಮಾರ್ ಆರೋಪಿಸಿದ್ದಾರೆ.
ದಾಖಲಾತಿ ತಿರುಚಿ ಚರ್ಚ್‌ನ ಪಾದ್ರಿಗಳಿಂದ ಜನರಿಗೆ ಅನ್ಯಾಯ : ಸುಂದರ್ ಪ್ರೇಮ್‌ಕುಮಾರ್ ಆರೋಪ - CSI TA Beneficiaries Secretary of Mysore Division Sundar Premkumar
ಬಿಷಪ್ ಅವರು ಏಕಾಏಕಿಯಾಗಿ ತಮ್ಮ ಅನುಕೂಲಕ್ಕಾಗಿ ತ್ಯಾಗರಾಜು ಅವರನ್ನು ಮಸಗಾಪುರದಿಂದ ಚಾಮರಾಜನಗರಕ್ಕೆ ಹಾಗೂ ಅವರ ಪತ್ನಿ ಉಷಾ ಅವರನ್ನು ಚಾಮರಾಜನಗರದಿಂದ ಮಸಗಾಪುರಕ್ಕೆ ವರ್ಗಾವಣೆ ಮಾಡಿದ್ದಾರೆ. ಇವರಿಬ್ಬರ ದುರಾಳಿತದ ಬಗ್ಗೆ ಬಿಷಪ್‌ರಿಗೆ ಮನವಿ ಸಲ್ಲಿಸಿದ್ದರೂ ಸ್ಪಂದಿಸಿಲ್ಲ..
ಓದಿ:ಗಣಿನಾಡಿನಲ್ಲಿ ವರ್ಷಕ್ಕೆ ಬರೋಬ್ಬರಿ 350 ಮಂದಿ ರಸ್ತೆ ಅಪಘಾತಕ್ಕೆ ಬಲಿ!!
ಬಿಷಪ್ ಅವರು ಏಕಾಏಕಿಯಾಗಿ ತಮ್ಮ ಅನುಕೂಲಕ್ಕಾಗಿ ತ್ಯಾಗರಾಜು ಅವರನ್ನು ಮಸಗಾಪುರದಿಂದ ಚಾಮರಾಜನಗರಕ್ಕೆ ಹಾಗೂ ಅವರ ಪತ್ನಿ ಉಷಾ ಅವರನ್ನು ಚಾಮರಾಜನಗರದಿಂದ ಮಸಗಾಪುರಕ್ಕೆ ವರ್ಗಾವಣೆ ಮಾಡಿದ್ದಾರೆ. ಇವರಿಬ್ಬರ ದುರಾಳಿತದ ಬಗ್ಗೆ ಬಿಷಪ್‌ರಿಗೆ ಮನವಿ ಸಲ್ಲಿಸಿದ್ದರೂ ಸ್ಪಂದಿಸಿಲ್ಲ. ಆ ಬಳಿಕ ತಹಸೀಲ್ದಾರ್ ಬಳಿ ಹೋಗಿ ಚಾಮರಾಜನಗರ ಹಾಗೂ ಮಸಗಾಪುರದಲ್ಲಿರುವ ಸಿಎಸ್‌ಐ ದೇವಾಲಯಗಳನ್ನು ಮುಚ್ಚಿಸಿದ್ದಾರೆ. ಈ ಸಂಬಂಧ ಸಮಗ್ರ ತನಿಖೆ ಮಾಡುವ ಮೂಲಕ ಬಿಷಪ್ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ಆ ಮೂಲಕ ನೊಂದ ಕ್ರೈಸ್ತರಿಗೆ ನ್ಯಾಯ ಸಿಗಬೇಕು. ನ್ಯಾಯ ಸಿಗುವ ತನಕ ಹೋರಾಟ ಮಾಡಲಾಗುವುದು ಎಂದರು.