ಕರ್ನಾಟಕ

karnataka

ಹೆಸರು ಬೆಳೆಗೆ ಹಳದಿ ನಂಜು: ಜಿಲ್ಲೆಗೆ ಹೊಂದಿಕೊಳ್ಳದ ತಳಿ ನೀಡ್ತಿದೆಯಾ ರೈತ ಸಂಪರ್ಕ ಕೇಂದ್ರ?

By

Published : Jun 11, 2021, 8:10 AM IST

ಚಾಮರಾಜನಗರ ಸೇರಿದಂತೆ ದಕ್ಷಿಣ ಒಣವಲಯ ಪ್ರದೇಶಕ್ಕೆ ಈ‌ ತಳಿ ಸೂಕ್ತವಾಗಿರದೆ ರೈತರು ಪದೇ ಪದೇ ಕೈ ಸುಟ್ಟುಕೊಳ್ಳುತ್ತಿದ್ದಾರೆ. ವೈರಸ್ ಬಾಧೆಗೆ ತುತ್ತಾದ ಗಿಡವನ್ನು ಕಿತ್ತು ಹಾಕದಿದ್ದ ಕಾರಣ ಇಡೀ ಫಸಲಿಗೆ ರೋಗ ಅಮರಿಕೊಳ್ಳಲಿದೆ. ಈಗಾಗಲೇ ತಾಲೂಕಿನ ಬಹುತೇಕ ಕಡೆಗಳಲ್ಲಿ ರೈತರು ರೋಗದಿಂದ ಬೆಳೆ ನಷ್ಟ ಅನುಭವಿಸಿದ್ದಾರೆ..

crop-problem-increased-in-chamarajanagara
ಹಳದಿ ನಂಜಿನ ರೋಗ

ಚಾಮರಾಜನಗರ: ಪೂರ್ವ ಮುಂಗಾರಿಗೆ ಬಿತ್ತನೆ ಮಾಡಿದ್ದ‌ ಹೆಸರು ಬೆಳೆಗೆ ಹಳದಿ ನಂಜಿನ ರೋಗ ಬಾಧಿಸುತ್ತಿದ್ದು, ಕೊರೊನಾ ಕಾಲದಲ್ಲಿ ತಾಲೂಕಿನ ರೈತರ ಸ್ಥಿತಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಚಾಮರಾಜನಗರ, ಸಂತೇಮರಹಳ್ಳಿ ಭಾಗದಲ್ಲಿ ಪೂರ್ವ ಮುಂಗಾರಿಗೆ ಹೆಚ್ಚಿನ ರೈತರು ರಾಯಚೂರಿನ‌ ಬಿಜಿಎಸ್-9 ಹೆಸರು ಬಿತ್ತನೆ ಮಾಡಿದ್ದು, ಇದು ಜಿಲ್ಲೆಯ ಹವಾಗುಣಕ್ಕೆ ಹೊಂದದ ತಳಿಯಾಗಿರುವುದರಿಂದ ರೋಗ ಬಾಧೆಗೆ ತುತ್ತಾಗುತ್ತಿದೆ. ಪೂರ್ವ ಮುಂಗಾರಿನ ಹೊತ್ತಿನಲ್ಲಿ ರಸಹೀರುವ ಕೀಟಗಳ ಸಂಖ್ಯೆ ಹೆಚ್ಚಿದ್ದು, ಹಳದಿ ನಂಜು ಮತ್ತು ಬೂದಿ ರೋಗಕ್ಕೆ ಈ ತಳಿ ಸಹಿಷ್ಣುತೆ ಹೊಂದಿಲ್ಲ ಎನ್ನಲಾಗುತ್ತಿದೆ.

ಹಳದಿ ನಂಜಿನ ರೋಗ ಕುರಿತು ರೈತರು ಮಾತು

ಚಾಮರಾಜನಗರ ಸೇರಿದಂತೆ ದಕ್ಷಿಣ ಒಣ ವಲಯ ಪ್ರದೇಶಕ್ಕೆ ಈ‌ ತಳಿ ಸೂಕ್ತವಾಗಿರದೇ ರೈತರು ಕೈ ಸುಟ್ಟುಕೊಳ್ಳುತ್ತಿದ್ದಾರೆ. ವೈರಸ್ ಬಾಧೆಗೆ ತುತ್ತಾದ ಗಿಡವನ್ನು ಕಿತ್ತು ಹಾಕದಿದ್ದ ಪ್ರಮೇಯದಲ್ಲಿ ಇಡೀ ಫಸಲಿಗೆ ರೋಗ ಅಮರಿಕೊಳ್ಳಲಿದೆ. ಈಗಾಗಲೇ ತಾಲೂಕಿನ ಬಹುತೇಕ ಕಡೆ ರೈತರು ರೋಗದಿಂದ ಬೆಳೆ ನಷ್ಟ ಅನುಭವಿಸಿದ್ದಾರೆ.

ನಮ್ಮ‌ ಏರಿಯಾಗೆ ಹೊಂದಿಕೊಳ್ಳುವ ತಳಿಗಳನ್ನು ತರಿಸಿ ಕೊಡಬೇಕು. ಈ ಬಾರಿಯ ಬೆಳೆಯಲ್ಲಿ ಒಂದು ರೂ. ಕೂಡ ಆದಾಯ ಬರುವುದಿಲ್ಲ. ಬಿತ್ತನೆ ಖರ್ಚು ಕೂಡಾ ಸಿಗುವುದಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:ಇಂಜಿನಿಯರಿಂಗ್​​ ಕಾಲೇಜುಗಳಲ್ಲಿ ವಿಜ್ಞಾನ ಆಧಾರಿತ ಕೋರ್ಸ್‌ ಬೋಧನೆ: ತಜ್ಞರು, ಉನ್ನತಾಧಿಕಾರಿಗಳ ಜತೆ ಡಿಸಿಎಂ ಚರ್ಚೆ

ABOUT THE AUTHOR

...view details