ಕರ್ನಾಟಕ

karnataka

ETV Bharat / state

Chamarajanagar crime : ದೊಡ್ಡಪ್ಪನ ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ.. ಅಪರಾಧಿಗೆ 20 ವರ್ಷ ಶಿಕ್ಷೆ - ಗ್ರಾಮಾಂತರ ಠಾಣೆ

ಚಾಮರಾಜನಗರದಲ್ಲಿ ವಿವಿಧ ಅಪರಾಧ ಪ್ರಕರಣಗಳು ನಡೆದಿದ್ದು ವಿವರ ಈ ಕೆಳಗಿನಂತಿದೆ.

ಅಪರಾಧ
ಅಪರಾಧ

By

Published : Jul 8, 2023, 7:46 AM IST

ಚಾಮರಾಜನಗರ:ಸಹೋದರ ಸಂಬಂಧಿಯಾದ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಹಾಗೂ ಬಲವಂತದ ದೈಹಿಕ ಸಂಪರ್ಕ ನಡೆಸಿದ್ದ ಯುವಕನಿಗೆ 20 ವರ್ಷ ಶಿಕ್ಷೆ ವಿಧಿಸಿ ಚಾಮರಾಜನಗರ ಮಕ್ಕಳ ಸ್ನೇಹಿ ನ್ಯಾಯಾಲಯ ಆದೇಶ ನೀಡಿದೆ. ಚಾಮರಾಜನಗರ ತಾಲೂಕಿನ ಗ್ರಾಮವೊಂದರ ಯುವಕ ರಂಗಸ್ವಾಮಿ(21) ಶಿಕ್ಷೆಗೊಳಗಾದ ಅಪರಾಧಿ.‌

ವಾರಿಗೆಯಲ್ಲಿ ದೊಡ್ಡಪ್ಪನ ಮಗಳಾದ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಈತ ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೇ, ಬಲವಂತದಿಂದ ದೈಹಿಕ ಸಂಪರ್ಕ ನಡೆಸಿದ್ದನು. ಈ ಸಂಬಂಧ 2020ರಲ್ಲಿ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಚಾರ್ಜ್​ ಶೀಟ್ ಸಲ್ಲಿಕೆಯಾಗಿತ್ತು.

ಯುವಕ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾ. ನಿಶಾರಾಣಿ ಯುವಕನಿಗೆ 20 ವರ್ಷ ಕಠಿಣ ಶಿಕ್ಷೆ 40 ಸಾವಿರ ದಂಡ ವಿಧಿಸಿದ್ದಾರೆ. ಸಂತ್ರಸ್ತ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರವು 4 ಲಕ್ಷ ಪರಿಹಾರ ಕೊಡಬೇಕೆಂದು ನ್ಯಾಯಾಧೀಶರು ನಿರ್ದೇಶನ ಕೊಟ್ಟಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಕೆ. ಯೋಗೇಶ್​ ವಾದ ಮಂಡಿಸಿದ್ದರು.

ಗೃಹಣಿ ಆತ್ಮಹತ್ಯೆಗೆ ಶರಣು:ಕೌಟಂಬಿಕ ಕಲಹಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆಗೆ ಶರಣಾದ ಘಟನೆ ಗುಂಡ್ಲುಪೇಟೆ ತಾಲೂಕಿನ ಬಲಚವಾಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಂಜುನಾಥ್ ಎಂಬುವರ ಪತ್ನಿ ರೂಪಾ(32) ಮೃತ ದುರ್ದೈವಿ. ಚಾಮರಾಜನಗರದ ಮಲೆಯೂರು ಗ್ರಾಮದಿಂದ ಬಲಚವಾಡಿಯ ಮಂಜುನಾಥ್​ನ್ನು ಕಳೆದ ಆರು ವರ್ಷದ ಹಿಂದೆ ರೂಪ ಮದುವೆಯಾಗಿದ್ದರು. ಪ್ರತಿ ದಿನವೂ ಕುಡಿದು ಬಂದು ಪತಿ ಜಗಳ ತೆಗೆಯುತ್ತಿದ್ದ. ಇದರಿಂದ ಬೇಸತ್ತು ರೂಪ ಆತ್ಮಹತ್ಯೆಗೆ ಶರಣಾಗಿದ್ದಾರೆ. ತೆರಕಣಾಂಬಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಕಲ್ಲು ಕ್ವಾರಿಯಲ್ಲಿ ವ್ಯಕ್ತಿ ಶವಪತ್ತೆ:ಸ್ಥಗಿತಗೊಂಡಿದ್ದ ಕಲ್ಲು ಕ್ವಾರಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಬೆಳಚಲವಾಡಿ ಗ್ರಾಮದಲ್ಲಿ ನಡೆದಿದೆ. ಬೆಳಚಲವಾಡಿ ಗ್ರಾಮದ ಸ್ವಾಮಿ(46) ಮೃತ ದುರ್ದೈವಿ. ಕಲ್ಲು ಕ್ವಾರಿಯೂ ಹಲವಾರು ವರ್ಷಗಳ ಹಿಂದೆಯೇ ಸ್ಥಗಿತಗೊಂಡಿದ್ದು ಸ್ವಾಮಿ ಅವರು ಏಕೆ ಅಲ್ಲಿಗೆ ತೆರಳಿದ್ದರು ಎಂಬುದು ಹಾಗೂ ಹೇಗೆ ಬಿದ್ದರು ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ. ಎರಡು ತಾಸು ಕಾರ್ಯಾಚರಣೆ ನಡೆಸಿ ಶವವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದ್ದು ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಹಲ್ಲೆ, ಸಾವು:ಸಂಬಂಧಿಕರ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಲಾಟೆಯಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ರಾಮಾಪುರದಲ್ಲಿ ನಡೆದಿದೆ. ರಾಮಾಪುರದ ಡಾ. ಬಿ. ಆರ್. ಅಂಬೇಡ್ಕರ್ ಬಡಾವಣೆಯ ವೆಂಕಟೇಶ ಮೃತ ವ್ಯಕ್ತಿ.

ರಾಮಪುರ ಗ್ರಾಮದ ಮೃತ ವೆಂಕಟೇಶ್​ರವರ ಚಿಕ್ಕಮ್ಮನ ಮಗ ಶಶಿಕುಮಾರ್ ಹಾಗೂ ವೆಂಕಟೇಶ್​ ನಡುವೆ ಹಣಕಾಸಿನ ವಿಚಾರಕ್ಕೆ ಗಲಾಟೆ ಆಗಿದೆ. ಬಳಿಕ ಜಗಳದಲ್ಲಿ ವೆಂಕಟೇಶ್​ಗೆ ಪೆಟ್ಟು ಬಿದ್ದ ಹಿನ್ನೆಲೆ ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿತ್ತು. ಆದರೆ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೇ ಗಾಯಾಗೊಂಡಿದ್ದ ವೆಂಕಟೇಶ್ ಮೃತಪಟ್ಟಿದ್ದಾನೆ. ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಶಶಿಕುಮಾರ್​ನನ್ನು ಬಂಧಿಸಲಾಗಿದೆ.

ಇದನ್ನೂ ಓದಿ:ಅಂಗಳದಲ್ಲಿ ಆಟವಾಡುತ್ತಿದ್ದ ಮಗುವಿಗೆ ಚಾಕಲೇಟ್​ ಆಸೆ ತೋರಿಸಿ ಅಪ್ರಾಪ್ತರಿಂದ ಅತ್ಯಾಚಾರ!

ABOUT THE AUTHOR

...view details