ಗುಂಡ್ಲುಪೇಟೆ: ತಾಲೂಕಿನ ಹಂಗಳ ಗ್ರಾಮದಲ್ಲಿನ ರಾಜಪ್ಪ ಎಂಬುವವರ ಜಮೀನಿನ ಕೊಟ್ಟಿಗೆಯಲ್ಲಿದ್ದ ಹಸು ಚಿರತೆ ಕೊಂದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗುಂಡ್ಲುಪೇಟೆ: ಚಿರತೆ ದಾಳಿಗೆ ಹಸು ಸಾವು - Gundlupete of Chamarajanagar
ಗುಂಡ್ಲುಪೇಟೆ ತಾಲೂಕಿನಲ್ಲಿ ನಾಲ್ಕೈದು ತಿಂಗಳಿನಿಂದ ಹುಲಿ ಚಿರತೆ ಕಾಟ ಇರಲಿಲ್ಲ. ಈಗ ಚಿರತೆ ದಾಳಿಗೆ ಹಸು ಮೃತಪಟ್ಟಿರುವುದು ರೈತರು ಬೆಚ್ಚಿ ಬಿದ್ದಿದ್ದಾರೆ.
ಚಿರತೆ ದಾಳಿಗೆ ಹಸು ಸಾವು
ಮಾಲೀಕರು ಹಸುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಗ್ರಾಮದಲ್ಲಿ ಇರುವ ಮನೆಯಲ್ಲಿ ಇದ್ದರು. ಈ ವೇಳೆ ಈ ಘಟನೆ ನಡೆದಿದೆ. ಜಮೀನಿನಲ್ಲಿ ಚಿರತೆ ಹೆಜ್ಜೆ ಗುರುತು ಸಹ ಕಂಡು ಬಂದಿದೆ.
ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಚಿರತೆ ದಾಳಿಯಿಂದ ಮೃತಪಟ್ಟಿದೆ ಎಂದು ತಿಳಿಸಿ ಮಹಜರು ಮಾಡಿ ಹಸುವನ್ನು ಹೂತಿದ್ದಾರೆ.