ಕರ್ನಾಟಕ

karnataka

ETV Bharat / state

ಬೆಂಗಳೂರಿಂದ ಹಳ್ಳಿಗೆ ಬಂದವರಿಗೆ ಕೋವಿಡ್ ಟೆಸ್ಟ್: ಸಚಿವ ಸುರೇಶ್​ ಕುಮಾರ್​ - covid zone

ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗಕ್ಕೆ ಹೆಚ್ಚು ಒತ್ತು ಕೊಡಲಾಗುತ್ತಿದ್ದು, ಬೆಂಗಳೂರಿನಿಂದ ಹಿಂತಿರುಗಿರುವವರನ್ನು ಪತ್ತೆ ಹಚ್ಚಿ ಕೋವಿಡ್ ಟೆಸ್ಟ್ ಮಾಡಿಸಲಾಗುವುದು‌. ಸೋಂಕು ಪತ್ತೆಯಾದರೆ ಆಸ್ಪತ್ರೆಗೆ ಇಲ್ಲವೇ ಹೋಂ ಐಸೋಲೇಷನ್​ಗೆ ಕಳುಹಿಸಲಾಗುವುದು ಎಂದು ಸಚಿವರು ಹೇಳಿದರು.

ಸಚಿವ ಸುರೇಶ್ ಕುಮಾರ್
ಸಚಿವ ಸುರೇಶ್ ಕುಮಾರ್

By

Published : Apr 29, 2021, 5:04 PM IST

Updated : Apr 29, 2021, 5:23 PM IST


ಚಾಮರಾಜನಗರ: ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲೇ ಹೆಚ್ಚು ಕೋವಿಡ್ ಸೋಂಕು ಹರಡುತ್ತಿರುವುದರಿಂದ 5ಕ್ಕಿಂತ ಹೆಚ್ಚು ಸೋಂಕು ಕಾಣಿಸಿಕೊಂಡ ಗ್ರಾಮಗಳನ್ನು ಕಂಟೋನ್ಮೆಂಟ್ ಝೋನ್ ಮಾಡಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ಸಿಎಂ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗಕ್ಕೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಬೆಂಗಳೂರಿನಿಂದ ಹಿಂತಿರುಗಿರುವವರನ್ನು ಪತ್ತೆ ಹಚ್ಚಿ ಕೋವಿಡ್ ಟೆಸ್ಟ್ ಮಾಡಿಸಲಾಗುವುದು‌. ಸೋಂಕು ಪತ್ತೆಯಾದರೆ ಆಸ್ಪತ್ರೆಗೆ ಇಲ್ಲವೇ ಹೋಂ ಐಸೋಲೇಷನ್​ಗೆ ಕಳುಹಿಸಲಾಗುವುದು ಎಂದರು.

ಸಚಿವ ಸುರೇಶ್​ ಕುಮಾರ್​ ಅವರಿಂದ ಮಾಹಿತಿ
ಕೊರೊನಾ ರೋಗ ಲಕ್ಷಣಗಳಿದ್ದು, ಸೋಂಕು ಇಲ್ಲದಿರುವ ಕೊರೊನಾ ಲೈಟ್ ಸಿಂಡ್ರೋಮ್ ವ್ಯಕ್ತಿಗಳನ್ನೂ ಕೂಡ ಕೊರೊನಾ ಸೋಂಕಿತರು ಎಂದು ಪರಿಗಣಿಸಿ ಚಿಕಿತ್ಸೆ ಕೊಡಲು ಡಿಸಿ ಅವರಿಗೆ ಸೂಚಿಸಿದ್ದೇನೆ‌. ಕೊರೊನಾ ಕರ್ಫ್ಯೂವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಜಿಲ್ಲಾಧಿಕಾರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿಗಳು ಮಾಸ್ಕ್ ಧರಿಸದವರು, ಸಾಮಾಜಿಕ ಅಂತರ ಕಾಪಾಡಿಕೊಳ್ಳದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿ ತಿಳಿಸಿದರು.ಜಿಲ್ಲೆಯಲ್ಲಿ ತಲೆದೋರಿರುವ ಕೊವ್ಯಾಕ್ಸಿನ್ ಸಮಸ್ಯೆಯನ್ನು ಸಿಎಂ ಗಮನಕ್ಕೆ ತರಲಾಗಿದೆ. ಜೊತೆಗೆ ಅಗತ್ಯ ರೆಮ್​ಡಿಸಿವಿರ್ ಮತ್ತು ಆಮ್ಲಜನಕ ಸಿಲಿಂಡರ್​ಗಳನ್ನು ಪೂರೈಸಲು ಮನವಿ ಮಾಡಿಕೊಳ್ಳಲಾಗಿದೆ. ಜಿಲ್ಲಾಡಳಿತ ಕೈಗೊಂಡಿರುವ ಅಗತ್ಯ ಕ್ರಮಗಳನ್ನು ತಿಳಿಸಿದ್ದು, ಕೊರೊನಾ ವಾರಿಯರ್ಸ್​ಗಾಗಿಯೇ 50 ಹಾಸಿಗೆಗಳನ್ನು ಮೀಸಲಿರಿಸಲಾಗಿದೆ ಎಂದರು.ಇದೇ ವೇಳೆ ಕೊರೊನಾ ನಿಯಂತ್ರಣ ತಪ್ಪಲು ರಾಜಕಾರಣಿಗಳ ಅಸಡ್ಡೆಯೇ ಕಾರಣ ಎಂಬ ಸಾರ್ವಜನಿಕರ, ನೆಟ್ಟಿಗರ ಮಾತಿಗೆ ಪ್ರತಿಕ್ರಿಯಿಸಿ, ರಾಜಕಾರಣಿಗಳು ಮನುಷ್ಯರೇ. ಇದೊಂದು ಯುದ್ಧದ ಸಮಯ. ರಾಜಕಾರಣಿಗಳು ನಾವು ಮೇಲ್ಪಂಕ್ತಿ ಹಾಕಿಕೊಡಬೇಕು. ಈ ವಿಚಾರದಲ್ಲಿ ಉಡಾಫೆ ಸರಿಯಲ್ಲ. ಬೇರೊಬ್ಬರನ್ನು ದೂರುತ್ತ ಕೂರುವ ಬದಲು ಕೊರೊನಾ ತಡೆಗೆ ಎಲ್ಲರೂ ಶ್ರಮಿಸಬೇಕೆಂದರು.
Last Updated : Apr 29, 2021, 5:23 PM IST

ABOUT THE AUTHOR

...view details