ಚಾಮರಾಜನಗರ: ಕೊರೊನಾ ಎರಡನೇ ಅಲೆಯ ಅಬ್ಬರ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ. ಇಂದು ಬರೋಬ್ಬರಿ 794 ಮಂದಿಗೆ ಸೋಂಕು ದೃಢಪಟ್ಟಿದ್ದು, 14 ಜನರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3,801ಕ್ಕೆ ಏರಿಕೆಯಾಗಿದೆ.
ಚಾಮರಾಜನಗರದಲ್ಲಿ ಕೊರೊನಾ ಅಬ್ಬರ: 794 ಹೊಸ ಕೇಸ್, 14 ಮಂದಿ ಸಾವು! - ಹೆಚ್ಚಾದ ಕೊರೊನಾ ಸಾವು
ಚಾಮರಾಜನಗರದಲ್ಲಿ ಕೊರೊನಾ ಅಬ್ಬರ ಮುಂದುವರಿದಿದೆ. ಇಂದು ಜಿಲ್ಲೆಯಲ್ಲಿ 794 ಹೊಸ ಕೇಸ್ಗಳು ಪತ್ತೆಯಾಗಿದ್ದರೆ, 14 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.
Corona
ಇಂದು 379 ಮಂದಿ ಗುಣಮುಖರಾಗಿದ್ದಾರೆ. 49 ಮಂದಿ ಐಸಿಯುನಲ್ಲಿದ್ದು 2,659 ಮಂದಿ ಹೋಂ ಐಸೋಲೇಷನ್ ನಲ್ಲಿದ್ದಾರೆ. 9,528 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.
14 ಮಂದಿ ಸಾವು: ಕೊರೊನಾ ಸೋಂಕಿತರ ಸಾವಿನ ಸರಣಿ ಮುಂದುವರೆದಿದ್ದು, ಇಂದು 14 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಕೊರೊನಾ ಸೋಂಕಿತರ ಸಾವಿನ ಸಂಖ್ಯೆ 212ಕ್ಕೆ ಏರಿಕೆಯಾಗಿದೆ.