ಚಾಮರಾಜನಗರ:ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಲು, ಅಹವಾಲು ಸಲ್ಲಿಸಬೇಕಾದರೆ ಕೋವಿಡ್ ನೆಗೆಟಿವ್ ವರದಿ ಇರಬೇಕು. ಇಲ್ಲದಿದ್ದರೇ, ಡಿಸಿ ಭೇಟಿಯ ಅವಕಾಶವೇ ಸಿಗುವುದಿಲ್ಲ.
ಹೌದು. ತಮ್ಮನ್ನು ಭೇಟಿ ಮಾಡಲು ನೆಗೆಟಿವ್ ವರದಿ ಕಡ್ಡಾಯಗೊಳಿಸಿ ಡಿಸಿ ಚಾರುಲತಾ ಸೋಮಲ್ ಮೌಖಿಕ ಆದೇಶ ನೀಡಿದ್ದಾರೆ. ಡಿಸಿ ಆಪ್ತಶಾಖೆ ಸಿಬ್ಬಂದಿ ಕೋವಿಡ್ ನೆಗೆಟಿವ್ ವರದಿ ಇಲ್ಲದವರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುತ್ತಿಲ್ಲ. ಈ ನಿಯಮ ಕಳೆದ ಮೂರು ದಿನಗಳಿಂದ ಜಾರಿಯಾಗಿದ್ದು, ಜಿಲ್ಲಾಡಳಿತ ಭವನದಲ್ಲೇ ಟೆಸ್ಟಿಂಗ್ ಸೆಂಟರ್ ಕೂಡ ಆರಂಭಿಸಲಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ