ಕರ್ನಾಟಕ

karnataka

ETV Bharat / state

ಮಾರುಕಟ್ಟೆಗಳಲ್ಲಿ ಜನ ಜಾತ್ರೆ: ಕೈ ಮುಗಿದು ಮನವಿ ಮಾಡಿದ ಅಧಿಕಾರಿಗಳು - officials appeal to follow covid rules

ಕೋವಿಡ್ ಪ್ರಕರಣಗಳು ಉಲ್ಬಣಗೊಳ್ಳುತ್ತಿದ್ದರೂ ಜನ ಮಾತ್ರ ಕ್ಯಾರೆ ಅನ್ನುತ್ತಿಲ್ಲ. ಚಾಮರಾಜನಗರದ ಮಾರುಕಟ್ಟೆಗಳಲ್ಲಿ ಇಂದು ಬೆಳಗ್ಗೆ ಜನ ಜಂಗುಳಿ ಕಂಡು ಬಂತು. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಜನರಿಗೆ ಕೋವಿಡ್ ಮಾರ್ಗಸೂಚಿ ಬಗ್ಗೆ ತಿಳಿ ಹೇಳುವ ಪ್ರಯತ್ನ ಮಾಡಿದರು.

Covid Awareness from Officers in Chamarajanagar
ಮಾರ್ಗಸೂಚಿ ಪಾಲಿಸುವಂತೆ ಕೈ ಮುಗಿದು ಮನವಿ ಮಾಡಿದ ಅಧಿಕಾರಿಗಳುficers in Chamarajanagar

By

Published : Apr 29, 2021, 11:18 AM IST

ಚಾಮರಾಜನಗರ: ಎರಡನೇ ದಿನದ ಕೊರೊನಾ ಕರ್ಫ್ಯೂ ನಡುವೆ ಅಗತ್ಯ ವಸ್ತುಗಳನ್ನು ಖರೀದಿಸಲು ನಗರದ ಮಾರುಕಟ್ಟೆಗಳಲ್ಲಿ ಜನಜಾತ್ರೆಯೇ ನೆರೆದಿತ್ತು. ಇದನ್ನು ನೋಡಿದ ಅಧಿಕಾರಿಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಜನರಿಗೆ ಕೈ ಮುಗಿದು ಬೇಡಿಕೊಂಡರು.

ಅಂಗಡಿ ಮುಂಗಟ್ಟು, ತರಕಾರಿ ಮಾರುಕಟ್ಟೆಗಳಲ್ಲಿ ಜನ ಖರೀದಿಗೆ ಮುಗಿ ಬಿದ್ದಿದ್ದರು. ಈ ವೇಳೆ ನಗರಸಭೆ ಯೋಜನಾ ನಿರ್ದೇಶಕ ಕೆ. ಸುರೇಶ್, ಆರೋಗ್ಯ ನಿರೀಕ್ಷಕ ಶರವಣ, ಸುರಕ್ಷ ತಂಡದೊಂದಿಗೆ ಫೀಲ್ಡಿಗಿಳಿದು ಜನರಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಮನವಿ ಮಾಡಿದರು.

ಮಾರ್ಗಸೂಚಿ ಪಾಲಿಸುವಂತೆ ಕೈ ಮುಗಿದು ಮನವಿ ಮಾಡಿದ ಅಧಿಕಾರಿಗಳು

ಇದನ್ನೂಓದಿ : ಹೆಂಡತಿಯ ಐಡಿ ಕಾರ್ಡ್ ದುರುಪಯೋಗ: ಪತಿ ಮಹಾಶಯನ ಮೈ ಚಳಿ ಬಿಡಿಸಿದ ಪೊಲೀಸ್​ ಆಯುಕ್ತ!

ಇಂದು ನಿಮ್ಮೊಂದಿಗೆ ಕೈ ಮುಗಿದು ಮನವಿ ಮಾಡಿಕೊಳ್ಳುತ್ತಿದ್ದೇವೆ. ನಾಳೆಯಿಂದ ಈ ರೀತಿ ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಪಿ.ಡಿ ಸುರೇಶ್ ಜನರಿಗೆ ಎಚ್ಚರಿ ನೀಡಿದರು.

ABOUT THE AUTHOR

...view details