ಚಾಮರಾಜನಗರ: ಆಮ್ಲಜನಕ ದುರಂತ ಕರಿಛಾಯೆಯಲ್ಲಿ ಮುಳುಗಿರುವ ಜಿಲ್ಲಾಸ್ಪತ್ರೆಯಲ್ಲಿ ಮತ್ತೊಂದು ಕರ್ಮಕಾಂಡ ಬಯಲಾಗಿದ್ದು, ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ.
ತಾಲೂಕಿನ ಸಂತೇಮರಹಳ್ಳಿ ಸಮೀಪದ ಆಲ್ದೂರು ಗ್ರಾಮದ 52 ವರ್ಷದ ಸೋಂಕಿತರೊಬ್ಬರು ನಾಪತ್ತೆಯಾಗಿದ್ದಾರೆ. ಆದರೆ, ಚೆನ್ನಾಗಿದ್ದಾರೆ ಎನ್ನುತ್ತಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ ಈಗ ರೋಗಿಯೇ ಇಲ್ಲ, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಎಂಬ ಹಾರಿಕೆ ಉತ್ತರ ಕೊಟ್ಟಿರುವುದಾಗಿ ಪುತ್ರ ನಾಗೇಂದ್ರ ಅಳಲು ತೋಡಿಕೊಂಡಿದ್ದಾರೆ.
ಕಳೆದ ಒಂದು ವಾರದ ಹಿಂದೆ ಕೊರೊನಾ ದೃಢಪಟ್ಟಿತ್ತು. ನಾಲ್ಕು ದಿನಗಳ ಹಿಂದೆ ಹೋಂ ಐಸೋಲೇಷನ್ನಲ್ಲಿದ್ದ ವ್ಯಕ್ತಿಗೆ ಉಸಿರಾಟದ ಸಮಸ್ಯೆಯಾಗಿದ್ದರಿಂದ ಸಂತೇಮರಹಳ್ಳಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲೂ ಕೂಡ ಆಮ್ಲಜನಕ ಕೊರತೆಯಾಗಿದ್ದರಿಂದ ಚಾಮರಾಜನಗರ ಕೋವಿಡ್ ಆಸ್ಪತ್ರೆಗೆ ಭಾನುವಾರ ದಾಖಲಾಗಿದ್ದರು.