ಚಾಮರಾಜನಗರ:ಕೆಮ್ಮು, ನೆಗಡಿ ಹಾಗೂ ಜ್ವರ ಇದ್ದವರು ಮಾತ್ರ ಮಾಸ್ಕ್ ಧರಿಸಿ ಎಂಬ ಕಟೌಟ್ಗಳನ್ನು ಹಾಕಿ ಗೊಂದಲ ಉಂಟು ಮಾಡಿದ್ದ ಆರೋಗ್ಯ ಇಲಾಖೆ, ಎಚ್ಚೆತ್ತುಕೊಂಡು ಈಗ ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸಿ ಎಂದು ಕಟೌಟ್ ಹಾಕಿದೆ.
ಜಿಲ್ಲಾಸ್ಪತ್ರೆ ಆವರಣ, ಜಿಲ್ಲಾಡಳಿತ ಭವನ, ತಾಲೂಕು ಕೇಂದ್ರಗಳು, ಸತ್ಯಮಗಲಂ ರಸ್ತೆ ಮುಂತಾದ ಕಡೆ ಕೊರೊನಾ ವೈರಸ್ ಜಾಗೃತಿಗಾಗಿ ಅಳವಡಿಸಿದ್ದ ಕಟೌಟ್ ನಲ್ಲಿ ಕೆಮ್ಮು, ನೆಗಡಿ ಇದ್ದವರು ಮಾತ್ರ ಮಾಸ್ಕ್ ಧರಿಸಿ ಎಂಬ ಬರಹ ಹಲವರ ಅಸಮಾಧಾನಕ್ಕೆ ಕಾರಣವಾಗಿತ್ತು.
ಎಲ್ಲರೂ ಮಾಸ್ಕ್ ಧರಿಸಿ ಎಂದು ತಿದ್ದುಪಡಿ ಮಾಡಿದ ಆರೋಗ್ಯ ಇಲಾಖೆ ಇದನ್ನು ಓದಿ: ಕೆಮ್ಮು, ನೆಗಡಿ ಇದ್ದರೇ ಮಾತ್ರ ಮಾಸ್ಕ್ ಧರಿಸಿ : ಗಡಿ ಜಿಲ್ಲೆ ಜನರಲ್ಲಿ ಗೊಂದಲ ಮೂಡಿಸಿದೆ ಕಟೌಟ್...!
ಈ ಕುರಿತು 'ಈಟಿವಿ ಭಾರತ' ಕಳೆದ 21 ರಂದು ವರದಿ ಬಿತ್ತರಿಸಿ ಆರೋಗ್ಯ ಇಲಾಖೆ ಮಾಡಿದ್ದ ಎಡವಟ್ಟನ್ನು ತೋರಿಸಿ, ಬದಲಾಯಿಸಲು ಇಲ್ಲವೇ ಸಮಜಾಯಿಷಿ ನೀಡಲು ಒತ್ತಾಯಿಸಿತ್ತು.
ವರದಿ ಬಳಿಕ ಎಚ್ಚೆತ್ತ ಆರೋಗ್ಯ ಇಲಾಖೆ ಎಲ್ಲಾ ಕಟೌಟ್ ಗಳಲ್ಲಿ ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸಿ ಎಂದು ತಿದ್ದುಪಡಿ ಮಾಡಿ ಜನರ ಗೊಂದಲಕ್ಕೆ ತೆರೆ ಎಳೆದಿದೆ.