ಮೈಸೂರು/ಚಾಮರಾಜನಗರ:ಚಾಮರಾಜನಗರದಲ್ಲಿಂದು 32 ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 5942ಕ್ಕೆ ಏರಿಕೆಯಾಗಿದ್ದರೆ, ಮೈಸೂರಿನಲ್ಲಿ 118 ಹೊಸ ಪ್ರಕರಣಗಳು ದಾಖಲಾಗುವ ಮೂಲಕ ಸೋಂಕಿತರ ಸಂಖ್ಯೆ 47,523 ಕ್ಕೇರಿದೆ.
ಇಂದು ಚಾಮರಾಜನಗರದಲ್ಲಿ 32, ಮೈಸೂರಿನಲ್ಲಿ 118 ಮಂದಿಗೆ ಕೊರೊನಾ - ಇಂದಿನ ಮೈಸೂರು ಕೊರೊನಾ ಸುದ್ಧಿ
ಚಾಮರಾಜನಗರದಲ್ಲಿಂದು 32 ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 5942ಕ್ಕೆ ಏರಿಕೆಯಾಗಿದ್ದರೆ, ಮೈಸೂರಿನಲ್ಲಿ 118 ಹೊಸ ಪ್ರಕರಣಗಳು ದಾಖಲಾಗುವ ಮೂಲಕ ಸೋಂಕಿತರ ಸಂಖ್ಯೆ 47,523 ಕ್ಕೇರಿದೆ.
ಚಾಮರಾಜನಗರದಲ್ಲಿ 26ಮಂದಿ ಗುಣಮುಖರಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 234ಕ್ಕೆ ಇಳಿಕೆಯಾಗಿದೆ. 45 ಮಂದಿ ಸೋಂಕಿತರು ಐಸಿಯುನಲ್ಲಿದ್ದು 117 ಮಂದಿ ಹೋಂ ಐಸೋಲೇಷನ್ನಲ್ಲಿದ್ದಾರೆ. 483 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ. ಜಿಲ್ಲೆಯ ಒಟ್ಟು ಪರೀಕ್ಷೆಗಳ ಸಂಖ್ಯೆ 93 ಸಾವಿರ ದಾಟಿದೆ.
ಮೈಸೂರಿನಲ್ಲಿ 236 ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಇದುವರೆಗೂ 44,786 ಮಂದಿ ಸೋಂಕಿತರು ಗುಣಮುಖರಾದಂತಾಗಿದೆ. ಜಿಲ್ಲೆಯಲ್ಲಿ ಇನ್ನೂ 1,781 ಸಕ್ರಿಯ ಪ್ರಕರಣಗಳು ಇವೆ. ಇಂದು ಓರ್ವ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 956 ಕ್ಕೆ ಏರಿಕೆಯಾಗಿದೆ.