ಚಾಮರಾಜನಗರ:ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಂತಿರುವ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆಗಳಿಗೆ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ.
ಈ ಕುರಿತು ಈಟಿವಿ ಭಾರತಕ್ಕೆ ಮಧುಮಲೈ ವಲಯ ಅರಣ್ಯಾಧಿಕಾರಿ ದಯಾನಂದನ್ ಮಾಹಿತಿ ನೀಡಿ, ಒಂದು ವಾರದ ಹಿಂದಷ್ಟೇ ಆನೆ ಕ್ಯಾಂಪಿನ ಇಬ್ಬರು ಸಿಬ್ಬಂದಿಗೆ ಕೋವಿಡ್ ದೃಢವಾಗಿದ್ದು 2 ಮರಿಯಾನೆ ಸೇರಿದಂತೆ 28 ಆನೆಗಳಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ.