ಕರ್ನಾಟಕ

karnataka

ETV Bharat / state

ಕೊರೊನಾ ಹರಡುವ ಕುರಿತು ಮೊದಲೇ ಮುನ್ಸೂಚನೆ ನೀಡಿತ್ತಾ ಬಿದಿರು? ಹೌದಂತಾರೆ ಕಾಡಿನ ‌ಮಕ್ಕಳು..! - Chamarajanagr district news

ಸೋಲಿಗರ ಪ್ರಕಾರ ಬಿದಿರು ಹೂ ಬಿಟ್ಟರೇ ಆಪತ್ತು ಎದುರಾಗಲಿದೆ. ಅದು ಬರಗಾಲದ ಮುನ್ಸೂಚನೆ ತೋರಿಸುತ್ತದೆ. ಆದರೆ, ಬರಗಾಲದ ಬದಲಿಗೆ ಮಹಾಮಾರಿ ಕೊರೊನಾ ವೈರಸ್​​​ ಹರಡುವ ಮೂಲಕ ಕೇಡುಗಾಲ ಬಂದಂತಾಗಿದೆ ಎನ್ನುತ್ತಾರೆ ಕಾಡಿನ ಮಕ್ಕಳು.

bamboo
ಬಿದಿರು

By

Published : Jul 2, 2020, 3:04 PM IST

ಚಾಮರಾಜನಗರ: ವಿಶ್ವವವನ್ನೇ ತತ್ತರಿಸುವಂತೆ ಮಾಡಿರುವ ಮಹಾಮಾರಿ ಕೊರೊನಾ ವೈರಸ್​ ಹರಡುವ ಕುರಿತು ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಬಿದಿರು ಮುನ್ಸೂಚನೆ ನೀಡಿತ್ತು ಎಂಬ ಚರ್ಚೆ ಸೋಲಿಗರ ಪೋಡುಗಳಲ್ಲಿ ನಡೆಯುತ್ತಿದೆ.

ಬೆಟ್ಟದ ವಿಜಿಕೆಕೆ ಮುಂಭಾಗದ ಮೂರು ಬಿದಿರು ಗಿಡಗಳಲ್ಲಿ ಒಂದು ಫೆಬ್ರವರಿಯಲ್ಲಿ ಹೂ ಬಿಟ್ಟು ಬರದ ಮುನ್ಸೂಚನೆ ನೀಡಿತ್ತು.‌ ಸೋಲಿಗರ ಪ್ರಕಾರ ಬಿದಿರು ಹೂ ಬಿಟ್ಟರೇ ಕೇಡುಗಾಲ ಬರುತ್ತೆ ಎಂಬ ನಂಬಿಕೆ ನಿಜವಾಗಿದೆ. ಆದರೆ, ಈ ಬಾರಿ ಬರದ ಬದಲಿಗೆ ಕೊರೊನಾ ಬಂದಿದೆ ಎನ್ನುತ್ತಿದ್ದಾರೆ ಕಾಡಿನ ಮಕ್ಕಳು.

50-60 ವರ್ಷಗಳಿಗೊಮ್ಮೆ ಬಿದಿರು ಹೂ ಬಿಟ್ಟು ಬಳಿಕ ಒಣಗಿ ಹೋಗಲಿದೆ. ಬಿದಿರು ಹೂ ಬಿಟ್ಟರೇ ಆಪತ್ತು ಬರಲಿದೆ ಎಂಬುದು ಗಿರಿಜನರ ನಂಬಿಕೆಯಾಗಿದೆ. ಈ ಕುರಿತು, ಪರಿಸರ ತಜ್ಞರಾದ ರಾಮಾಚಾರಿ ಈಟಿವಿ ಭಾರತದೊಂದಿಗೆ ಮಾತನಾಡಿ, ಮರ-ಗಿಡಗಳು ಹೂ, ಕಾಯಿ ಬಿಟ್ಟಾಗ, ಪ್ರಾಣಿಗಳು ಕೆಲವೊಮ್ಮೆ ಕೂಗುವ ಶಬ್ಧಗಳಿಂದ ಮುಂದೆ ಆಗಬಹುದಾದ ಕೆಲ ವಿಚಾರಗಳನ್ನು ಅರಿಯುತ್ತವೆ ಎಂದು ತಿಳಿಸಿದರು.‌

ಕೊರೊನಾ ಹರಡುವ ಮುನ್ಸೂಚನೆ ನೀಡಿತ್ತಾ ಬಿದಿರು ಎಂಬುದರ ಕುರಿತು ಕಾಡಿನ ಜನರ ಅಭಿಪ್ರಾಯಗಳು

ಬಿದಿರು ಹೂ ಬಂದಾಗ ಬರ ಬರಲಿದೆ, ಅನಾಹುತ ಆಗಲಿದೆ ಎಂದು ಇಲ್ಲಿನ ಹಿರಿಯರು ಹೇಳಿದ್ದರು. ಬರದ ಬದಲು ಕೊರೊನಾ ಬಂದಿದೆ. ಕೆಲವು ಅಂಶಗಳು ವೈಜ್ಞಾನಿಕವಾಗಿಯೂ ಸತ್ಯ ಎನಿಸುತ್ತವೆ. ಆನೆ ಜಾಡು ಹಿಡಿಯುವುದು, ಹುಲಿ ಜಾಡು ಹಿಡಿಯುವುದು, ದಾರಿಹೋಕ ಪಕ್ಷಿ ಸಿಗುವುದು, ಬಿದಿರು ಹೂ ಬಿಟ್ಟಾಗ ಅನಾಹುತಗಳಾಗಿವೆ ಎಂದರು.

ಗಿರಿಜನರ ಮುಖಂಡ ಡಾ. ಮಾದೇಗೌಡ ಈ ಕುರಿತು ಪ್ರತಿಕ್ರಿಯಿಸಿ, ಸೋಲಿಗರ ಪದ್ಧತಿ ಪ್ರಕಾರ ಬಿದಿರು ಹೂ ಬಿಟ್ಟಾಗ ಬರಗಾಲದ ಮುನ್ಸೂಚನೆ. ಈಗ, ಜನರ ಜೀವನ ಬದಲಾಗಿರುವುದರಿಂದ ಬಿದಿರು ಕೊರೊನಾ ಅನಾಹುತದ ಬಗ್ಗೆ ಮುನ್ಸೂಚನೆ ಕೊಟ್ಟಿರುವುದು ಕಾಕತಾಳೀಯ ಆಗಿದೆ ಎಂದರು. ಕಾಡಿನಮಕ್ಕಳಿಗೂ ಕೊರೊನಾ ಭೀತಿ ಕಾಡಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಅವರು ತೆಗೆದುಕೊಂಡಿದ್ದಾರೆ.

ABOUT THE AUTHOR

...view details