ಚಾಮರಾಜನಗರ :ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಅವರ ಪೌಷ್ಟಿಕ ಆಹಾರ ಕಿಟ್ ಪಡೆಯಲು ಜನಜಾತ್ರೆ ಸೇರುವ ಮೂಲಕ ಕೊರೊನಾ ನಿಯಮವನ್ನು ಗಾಳಿಗೆ ತೂರಿದ ಘಟನೆ ನಗರದ ಜಿಲ್ಲಾಡಳಿತ ಭವನದಲ್ಲಿ ನಡೆಯಿತು.
ಆಹಾರ ಕಿಟ್ ಪಡೆಯಲು ಜನಜಾತ್ರೆ : ಸಚಿವರ ಸಮ್ಮುಖದಲ್ಲೆ ಕೋವಿಡ್ ನಿಯಮ ಗಾಳಿಗೆ - ಕೊರೊನಾ ನಿಯಮ ಉಲ್ಲಂಘಿಸಿದ ಸಚಿವೆ ಶಶಿಕಲಾ ಜೊಲ್ಲೆ
3ನೇ ಅಲೆ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂಬ ತಜ್ಞರ ಎಚ್ಚರಿಕೆ ಇದೆ. ಅದಾಗ್ಯೂ, ಜನರಿಗೆ ಬುದ್ಧಿ ಹೇಳಬೇಕಿದ್ದ ಸಚಿವರೇ ಕೊರೊನಾ ನಿಯಮ ಉಲ್ಲಂಘನೆಗೆ ಮಾಡಿದ್ದು ವಿಪರ್ಯಾಸ. ಅಲ್ಲದೆ ಪಾಲಕರ ಅಸಡ್ಡೆ ಕೋವಿಡ್ ಮೇಲೆ ಇರುವ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿತ್ತು..
ಜಿಲ್ಲಾ ಪ್ರವಾಸ ಕೈಗೊಂಡಿರುವ ಸಚಿವೆ ಶಶಿಕಲಾ ಜೊಲ್ಲೆ ಅವರು ಜಿಲ್ಲಾಡಳಿತ ಭವನದಲ್ಲಿ ಪೌಷ್ಟಿಕ ಆಹಾರದ ಕಿಟ್ ವಿತರಿಸಿದರು. ಈ ಸಂದರ್ಭದಲ್ಲಿ ಸಚಿವೆ ಜೊಲ್ಲೆ ಸೇರಿದಂತೆ ಅಲ್ಲಿದ್ದ ಎಲ್ಲರೂ ಸಾಮಾಜಿಕ ಅಂತರವನ್ನು ಮರೆತಿದ್ದರು. ಕೆಲವು ಪೋಷಕರು ತಮ್ಮ ಮಕ್ಕಳಿಗೆ ಮಾಸ್ಕ್ ಕೂಡ ಹಾಕದೇ ಬೇಜಾವಾಬ್ದಾರಿತನ ಮೆರೆದರು.
3ನೇ ಅಲೆ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂಬ ತಜ್ಞರ ಎಚ್ಚರಿಕೆ ಇದೆ. ಅದಾಗ್ಯೂ, ಜನರಿಗೆ ಬುದ್ಧಿ ಹೇಳಬೇಕಿದ್ದ ಸಚಿವರೇ ಕೊರೊನಾ ನಿಯಮ ಉಲ್ಲಂಘನೆಗೆ ಮಾಡಿದ್ದು ವಿಪರ್ಯಾಸ. ಅಲ್ಲದೆ ಪಾಲಕರ ಅಸಡ್ಡೆ ಕೋವಿಡ್ ಮೇಲೆ ಇರುವ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿತ್ತು.