ಚಾಮರಾಜನಗರ:ಜಿಲ್ಲೆಯಲ್ಲಿಂದು 70 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1,221ಕ್ಕೆ ಏರಿಕೆಯಾಗಿದೆ.
ಚಾಮರಾಜನಗರ; 70 ಮಂದಿಗೆ ಸೋಂಕು.. 38 ಜನ ಡಿಸ್ಚಾರ್ಜ್ - Chamarajanagar Corona death
ಚಾಮರಾಜನಗರ ಜಿಲ್ಲೆಯಲ್ಲಿಂದು 70 ಮಂದಿಗೆ ಕೊರೊನಾ ದೃಢಪಟ್ಟಿದ್ದು, 38 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಇಂದು ನಾಲ್ಕು ಮಕ್ಕಳು, 82 ವರ್ಷದ ಓರ್ವ ವೃದ್ಧ ಸೇರಿ 38 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, 388 ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ 13 ಮಂದಿ ಐಸಿಯುಗೆ ದಾಖಲಾಗಿದ್ದಾರೆ. 356 ಮಂದಿ ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ. ಕಳೆದ 29ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ಚಾಮರಾಜನಗರದ 68 ವರ್ಷದ ವ್ಯಕ್ತಿಯೋರ್ವ ಮೂತ್ರಪಿಂಡ ವೈಫಲ್ಯದಿಂದ ಭಾನುವಾರ ರಾತ್ರಿ ಮೃತಪಟ್ಟಿದ್ದು, ಮೃತರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.
ಜಿಲ್ಲಾವಾರು ವರದಿ:ಚಾಮರಾಜನಗರ ತಾಲೂಕಿನಲ್ಲಿ 25, ಕೊಳ್ಳೇಗಾಲ 28, ಗುಂಡ್ಲುಪೇಟೆ 06, ಯಳಂದೂರು 10 ಹಾಗೂ ಹನೂರು ತಾಲೂಕಿನಲ್ಲಿ ಓರ್ವ ಸೋಂಕಿತ ಪತ್ತೆಯಾಗಿದ್ದಾರೆ.