ಕರ್ನಾಟಕ

karnataka

ಲಸಿಕೆ ಪಡೆದಿದ್ದ ಚಾಮರಾಜನಗರದ ಐವರು ವೈದ್ಯರಿಗೆ ವಕ್ಕರಿಸಿತು ಕೊರೊನಾ: ಡಿಎಚ್ಒ ಹೇಳಿದ್ದಿಷ್ಟು

ಚಾಮರಾಜನಗರದಲ್ಲಿ ಇತ್ತೀಚೆಗೆ ಲಸಿಕೆ ಪಡೆದಿದ್ದವರಲ್ಲಿ ಐದು ಜನ ವೈದ್ಯರಿಗೆ ಕೊರೊನಾ ಸೋಂಕು ತಗುಲಿದೆ. ಈ ಕುರಿತಂತೆ ಡಿಹೆಚ್​ಒ ಡಾ.ರವಿಯವರು ಮಾಹಿತಿ ನೀಡಿದ್ದಾರೆ.

By

Published : Jan 30, 2021, 11:18 AM IST

Published : Jan 30, 2021, 11:18 AM IST

Updated : Jan 30, 2021, 1:11 PM IST

ಚಾಮರಾಜನಗರ ಕೋವಿಡ್​ ಆಸ್ಪತ್ರೆ
Chamarajanagara hospital

ಚಾಮರಾಜನಗರ: ಒಂದೆಡೆ ಕೊರೊನಾ ಮುಕ್ತವಾಗುವತ್ತ ಜಿಲ್ಲೆ ದಾಪುಗಾಲು ಇಡುತ್ತಿದ್ದರೆ, ಮತ್ತೊಂದೆಡೆ ಕೋವಿಡ್ ಲಸಿಕೆ ಪಡೆದಿದ್ದ ಐವರು ವೈದ್ಯರಿಗೆ ಮಹಾಮಾರಿ ವಕ್ಕರಿಸಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಈ ಕುರಿತಂತೆ ಡಿಹೆಚ್​ಒ ಡಾ.ರವಿ ಅವರು ಪ್ರತಿಕ್ರಿಯಿಸಿದ್ದಾರೆ.

ಚಾಮರಾಜನಗರ ಡಿಎಚ್ಒ ಡಾ.ರವಿ ಪ್ರತಿಕ್ರಿಯೆ

ಕೆಲ ವೈದ್ಯರಿಗೆ ಲಸಿಕೆ ನೀಡಿದ 7 ದಿನಗಳ ಅಂತರದಲ್ಲಿ ಕೋವಿಡ್ ಪಾಸಿಟಿವ್ ಬಂದಿದೆ. ಲಸಿಕೆ ಪಡೆದ 7 ಮಂದಿ ವೈದ್ಯರಲ್ಲಿ ಐವರಿಗೆ ಸೋಂಕು ತಗುಲಿದೆ. ಈ ಪೈಕಿ ಓರ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದ ನಾಲ್ವರು ಹೋಂ ಐಸೋಲೇಷನ್​​​ನಲ್ಲಿದ್ದಾರೆ.

ಈ ಸಂಬಂಧ ವೈದ್ಯರೊಬ್ಬರು 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯಿಸಿದ್ದು, ಆರಂಭದ ದಿನಗಳಲ್ಲಿ ಕೋವಿಡ್ ಕೇರ್ ಸೆಂಟರ್​ನಲ್ಲಿ ಕಾರ್ಯ‌ ನಿರ್ವಹಿಸಿದ್ದೇವೆ. ಆದ್ರೆ ಆಗ ಬರದ ಕೊರೊನಾ ಈಗ ಬಂದಿದ್ದು, ನಮಗೂ ಒಂದು ರೀತಿ ಬೇಸರ ತರಿಸಿದೆ. ಸದ್ಯ ನಾವು ಆರೋಗ್ಯವಾಗಿದ್ದೇವೆ ಎಂದು ತಿಳಿಸಿದರು.

ಡಿಎಚ್ಒ ಹೇಳಿದಿಷ್ಟು :

ಜಿಲ್ಲೆಯಲ್ಲಿ ಐವರು ವೈದ್ಯರಿಗೆ ಕೊರೊನಾ ತಗುಲಿದೆ. ಇವರು ವ್ಯಾಕ್ಸಿನ್​ ಪಡೆದಿದ್ದು ನಿಜ. ಆದರೆ ಇವರಿಗೆ ಕೊರೊನಾ ಬರುವುದಕ್ಕೂ, ಲಸಿಕೆ ಪಡೆದಿರುವುದಕ್ಕೆ ಯಾವುದೇ ಸಂಬಂಧ ಇಲ್ಲ. ಲಸಿಕೆ ಪಡೆದು ನಾಲ್ಕರಿಂದ ಐದು ವಾರಗಳಲ್ಲಿ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಲು ಸಮಯ ಬೇಕಾಗುತ್ತದೆ. ಇಕ್ಯೂಪೇಷನ್​ ಪೀರಿಡ್​ನಲ್ಲಿದ್ದಾಗ ರೋಗ ಬರುವುದು ಸಹಜ. ಇವರಿಗೆ ಕೊರೊನಾ ಲಕ್ಷಣಗಳಿದ್ದು, ಪರೀಕ್ಷೆಗೆ ಒಳಪಟ್ಟಾಗ ದೃಢಪಟ್ಟಿದೆ. ಸೋಂಕಿತ ವೈದ್ಯರ ಸಂಪರ್ಕಿತರನ್ನು ಪರೀಕ್ಷೆ ಒಳಪಡಿಸಲಾಗುತ್ತದೆ ಎಂದರು.

ಲಸಿಕೆ ಪಡೆದ ಒಂದು ವಾರದಲ್ಲಿ ಈ ರೀತಿಯಾಗಿದೆ. ಇವರಿಗೆ ಲಕ್ಷಣಗಳಿದಿದ್ದರಿಂದ ಪರೀಕ್ಷೆಗೆ ಒಳಗಾದಾಗ ಕೊರೊನಾ ಸೋಂಕು ತಗುಲಿದೆ. ಲಸಿಕೆ ಪಡೆದು ಈ ವೈದ್ಯರು ಕರ್ತವ್ಯದಲ್ಲಿ ನಿರತರಾಗಿದ್ದು, ಈ ವೇಳೆ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ತಿಳಿಸಿದರು.

ವ್ಯಾಕ್ಸಿನ್​ ತೆಗೆದುಕೊಂದಿದ್ದಕ್ಕೂ, ಕೊರೊನಾ ಬಂದಿದ್ದಕ್ಕೂ ಯಾವುದೇ ಸಂಬಂಧವಿಲ್ಲ. ಇದರಿಂದ ಜನರು ಆತಂಕ ಪಡಬಾರದು. ಎಲ್ಲರೂ ಯಾವುದೇ ಭಯವಿಲ್ಲದೆ ಲಸಿಕೆ ಪಡೆಯಬಹುದು ಎಂದು ಡಿಎಚ್​ಒ ಧೈರ್ಯ ತುಂಬಿದರು.

Last Updated : Jan 30, 2021, 1:11 PM IST

ABOUT THE AUTHOR

...view details