ಕರ್ನಾಟಕ

karnataka

ETV Bharat / state

36 ದಿನಗಳ ಬಳಿಕ ಕೊರೊನಾಗೆ ಚಾಮರಾಜನಗರದಲ್ಲಿ ಇಬ್ಬರು ಬಲಿ - ಕೊರೊನಾ ಸೋಂಕಿತರು ಸಾವು

ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಸಾವಿನಲ್ಲೂ ಇಳಿಮುಖ ಕಂಡಿದ್ದ ಚಾಮರಾಜನಗರದಲ್ಲಿ ಇಂದು ಮತ್ತೆ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದು, ಮತ್ತೆ ಜಿಲ್ಲೆಯ ಜನರಿಗೆ ಆತಂಕ ಉಂಟುಮಾಡಿದೆ.

ಕೊರೊನಾ
corona patients

By

Published : Dec 20, 2020, 8:33 PM IST

ಚಾಮರಾಜನಗರ: ಹಲವು ದಿನಗಳ ಬಳಿಕ ಚಾಮರಾಜನಗರದಲ್ಲಿ ಕೊರೊನಾ ಸಾವು ಸಂಭವಿಸಿದ್ದು ಮಹಾಮಾರಿ ಮತ್ತೆ ಆತಂಕ ತರಿಸಿದೆ‌.

ಕಳೆದ ನವೆಂಬರ್ 13 ರಂದು ಜಿಲ್ಲೆಯಲ್ಲಿ ಸೋಂಕಿತರೊಬ್ಬರು ಮೃತಪಟ್ಟಿದ್ದರು‌. ಅದಾದ ಬಳಿಕ, ಕೊರೊನಾಗೆ ಯಾರೂ ಬಲಿಯಾಗಿರಲಿಲ್ಲ. ಆದರೆ, ಇಂದು ಚಾಮರಾಜನಗರ ತಾಲೂಕಿನ ಆಲೂರು ಹೊಮ್ಮ ಗ್ರಾಮದ 60 ವರ್ಷದ ವ್ಯಕ್ತಿ ಮತ್ತು ಚಾಮರಾಜನಗರ ತಾಲೂಕಿನ ಕುಲಗಾಣ ಗ್ರಾಮದ 70 ವರ್ಷದ ಮಹಿಳೆ ಸೋಂಕಿಗೆ ತುತ್ತಾಗಿ ಚೇತರಿಸಿಕೊಳ್ಳಲಾಗದೆ ಅಸುನೀಗಿದ್ದಾರೆ.

ಓದಿ:ಹಾಲಿನ ಬದಲಿಗೆ ಕೋಳಿ ರಕ್ತ, ತಲೆಯೇ ಇಲ್ಲಿ ನಾಗಪ್ಪನಿಗೆ ನೈವೇದ್ಯ!

ಇದುವರೆಗೆ ಜಿಲ್ಲೆಯಲ್ಲಿ ಕೋವಿಡ್​ನಿಂದ 111 ಮಂದಿ ಹಾಗೂ ಕೋವಿಡೇತರ ಕಾರಣದಿಂದ 20 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 107 ಇದ್ದು ಹೋಂ ಐಸೋಲೇಷನ್​ನಲ್ಲಿ 60 ಮಂದಿ ಇದ್ದಾರೆ.

ABOUT THE AUTHOR

...view details