ಕರ್ನಾಟಕ

karnataka

ETV Bharat / state

ಕೇರಳ ಅಷ್ಟೇ ಅಲ್ಲ, ತಮಿಳುನಾಡಿನಿಂದ ಬರಲು ಬೇಕು ಕೊರೊನಾ ನೆಗೆಟಿವ್ ರಿಪೋರ್ಟ್​

ಇಂದಿನಿಂದ ತಮಿಳುನಾಡಿನಿಂದ ಸಾರಿಗೆ ಬಸ್ ಮತ್ತು ಸ್ವಂತ ವಾಹನಗಳಲ್ಲಿ ರಾಜ್ಯಕ್ಕೆ ಬರುವವರು ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿದ್ದರೂ 72 ಗಂಟೆಯ ಒಳಗಿನ ಕೊರೊನಾ ನೆಗೆಟಿವ್ ಪ್ರಮಾಣ ಪತ್ರವನ್ನು ತರುವುದು ಕಡ್ಡಾಯ ಮಾಡಲಾಗಿದೆ.

tamilnadu
ತಮಿಳುನಾಡು ಗಡಿಯಲ್ಲಿ ಭದ್ರತೆ

By

Published : Aug 8, 2021, 10:40 AM IST

ಚಾಮರಾಜನಗರ:ಕೇರಳದಿಂದಷ್ಟೇ ಅಲ್ಲದೇ ತಮಿಳುನಾಡಿನಿಂದಲೂ ಬರುವವರಿಗೆ ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಿ ಚಾಮರಾಜನಗರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಇಷ್ಟು ದಿನ ತಮಿಳುನಾಡಿನಿಂದ ಬರುತ್ತಿದ್ದವರನ್ನು ಕೇವಲ ಸ್ಕ್ರೀನಿಂಗ್​ಗಷ್ಟೇ ಒಳಪಡಿಸಲಾಗುತ್ತಿತ್ತು. ಆದರೆ, ಇಂದಿನಿಂದ ತಮಿಳುನಾಡಿನಿಂದ ಸಾರಿಗೆ ಬಸ್ ಮತ್ತು ಸ್ವಂತ ವಾಹನಗಳಲ್ಲಿ ರಾಜ್ಯಕ್ಕೆ ಬರುವವರು ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿದ್ದರೂ 72 ಗಂಟೆಯ ಒಳಗಿನ ಕೊರೊನಾ ನೆಗೆಟಿವ್ ಪ್ರಮಾಣ ಪತ್ರವನ್ನು ತರುವುದನ್ನು ಕಡ್ಡಾಯ ಮಾಡಲಾಗಿದೆ.

ಚಾಮರಾಜನಗರ ತಾಲೂಕಿನ ಪುಣಜನೂರು ಚೆಕ್ ಪೋಸ್ಟ್, ಹನೂರು ತಾಲೂಕಿನ ಪಾಲಾರ್(ಮೆಟ್ಟೂರು ರಸ್ತೆ), ನಾಲ್‍ರೋಡ್-ಅರ್ಧನಾರೀಪುರ ಚೆಕ್ ಪೋಸ್ಟ್ ಹಾಗೂ ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಕೆಕ್ಕನಹಳ್ಳ‌ ಚೆಕ್‍ಪೋಸ್ಟ್​ಗಳಲ್ಲಿ ನೆಗೆಟಿವ್ ಪ್ರಮಾಣಪತ್ರ ಇದ್ದವರನ್ನು ಮಾತ್ರ ಒಳಕ್ಕೆ ಬಿಡಬೇಕು. ನಿರ್ದೇಶನಗಳನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಸಿಬ್ಬಂದಿಗೆ ಡಿಸಿ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details