ಕರ್ನಾಟಕ

karnataka

ETV Bharat / state

ಚಾಮರಾಜನಗರದಲ್ಲಿ 70 ಕೋವಿಡ್ ಕೇಸ್: ಆಸ್ಪತ್ರೆಗೆ ರವಾನಿಸುವಾಗ ಓರ್ವ ಸೋಂಕಿತ ಸಾವು - Corona infected death while transporting to hospital

ಕೊರೊನಾ ಸೋಂಕಿತನೊಬ್ಬ ಇಂದು ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.

Corona infected death while transporting to hospital
ಆಸ್ಪತ್ರೆಗೆ ರವಾನಿಸುವಾಗ ಓರ್ವ ಸೋಂಕಿತ ಸಾವು

By

Published : Apr 16, 2021, 8:56 PM IST

ಚಾಮರಾಜನಗರ: ಜಿಲ್ಲೆಯಲ್ಲಿ ಕೊರೊನಾ ಏರುಗತಿಯಲ್ಲಿದ್ದು, ಕೊರೊನಾ ಸೋಂಕಿತನೊಬ್ಬ ಇಂದು ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯೆಯೇ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.

ಗುಂಡ್ಲುಪೇಟೆ ತಾಲೂಕಿನ ಬೆಟ್ಟಹಳ್ಳಿ ಗ್ರಾಮದ 58 ವರ್ಷದ ವ್ಯಕ್ತಿಯೊಬ್ಬನಿಗೆ ಕೊರೊನಾ ದೃಢಪಟ್ಟಿದ್ದು, ಹೆಚ್ಚಿನ ಚಿಕಿತ್ಸೆಗೆ ಗುಂಡ್ಲುಪೇಟೆಯಿಂದ ಜಿಲ್ಲಾಸ್ಪತ್ರೆಗೆ ರವಾನಿಸುವಾಗ ಮಾರ್ಗ ಮಧ್ಯೆ ಅಸುನೀಗಿದ್ದಾನೆ ಎಂದು ಆರೋಗ್ಯ ಇಲಾಖೆ ತನ್ನ ಬುಲೆಟಿನ್​​​​ನಲ್ಲಿ ತಿಳಿಸಿದೆ.

ಇಂದು ಹೊಸದಾಗಿ 70 ಕೋವಿಡ್ ಕೇಸ್ ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 345ಕ್ಕೆ ಏರಿಕೆಯಾಗಿದೆ. 29 ಮಂದಿ ಗುಣಮುಖರಾಗಿದ್ದಾರೆ. 16 ಮಂದಿ ಐಸಿಯುನಲ್ಲಿದ್ದು, 200 ಮಂದಿ ಹೋಂ ಐಸೋಲೇಷನ್​ನಲ್ಲಿದ್ದಾರೆ. 910 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದ್ದು, 4,240 ಮಂದಿಗೆ ಲಸಿಕೆ ನೀಡಲಾಗಿದೆ‌.

ABOUT THE AUTHOR

...view details