ಚಾಮರಾಜನಗರ: ಕೋವಿಡ್ ಕೇರ್ ಸೆಂಟರ್ ಅವ್ಯವಸ್ಥೆ, ಊಟ ಸರಿಯಿಲ್ಲ ಎಂಬುದೆಲ್ಲಾ ಮಾಯವಾಗಿ ಕೊರೊನಾ ಸೋಂಕಿತರು ಸಖತ್ ಸ್ಟೆಪ್ಸ್ ಹಾಕಿರುವ ಘಟನೆ ಚಾಮರಾಜನಗರ ಮೆಡಿಕಲ್ ಕಾಲೇಜಿನ ಕೋವಿಡ್ ಕೇರ್ ಸೆಂಟರ್ ಮತ್ತು ಗುಂಡ್ಲುಪೇಟೆಯ ಸಿಸಿ ಕೇಂದ್ರದಲ್ಲಿ ನಡೆದಿದೆ.
ಸಖತ್ ಸ್ಟೆಪ್ಸ್ ಹಾಕಿದ ಕೊರೊನಾ ಸೋಂಕಿತ ಮಕ್ಕಳು, ಪಂಚೆ ಎತ್ತಿ ಕಟ್ಟಿ ಕುಣಿದ ಹಿರಿಯರು..! - ಚಾಮರಾಜನಗರ:
ಕೋವಿಡ್ ಕೇರ್ ಸೆಂಟರ್ನಲ್ಲಿ ಕೊರೊನಾ ಸೋಂಕಿತರು ಸಖತ್ ಡ್ಯಾನ್ಸ್ ಮಾಡಿದ್ದಾರೆ. ಹಾಗೆ ಮಕ್ಕಳು ಮಹಿಳೆಯರು ಮುದುಕರೆನ್ನದೇ ಎಲ್ಲರೂ ರಾಬರ್ಟ್ ಹಾಡಿಗೆ ಹೆಜ್ಜೆ ಹಾಕಿದ್ದು, ವಿಡಿಯೋ ನೋಡಿದವರು ಸಖತ್ ಎಂಜಾಯ್ ಮಾಡುತ್ತಿದ್ದಾರೆ.
Corona Infected Children dance in chamarajanagar
ಕೊರೊನಾ ಬಂದ ಕೂಡಲೇ ಪ್ರಪಂಚವೇ ಬಿದ್ದಂತೆ ಭೀತಿಗೊಳಗಾಗದೇ ಧೈರ್ಯದಿಂದ ಇದ್ದು ಗುಣಮುಖರಾಗಲು ಆತ್ಮಸ್ಥೈರ್ಯ ತುಂಬಲು ಆರೋಗ್ಯ ಸಿಬ್ಬಂದಿ ಮನರಂಜನೆ ಮೊರೆ ಹೋಗಿದ್ದು ಸೋಂಕಿತರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಮಹಿಳೆಯರಾದಿಯಾಗಿ ಬಹುಪಾಲು ಎಲ್ಲ ಸೋಂಕಿತರು ಹಾಡಿನ ಮೋಡಿ, ದಾದಿಯರ ಡ್ಯಾನ್ಸ್ ಗೆ ಜೊತೆಗೂಡಿ ಸ್ಟೆಪ್ಸ್ ಹಾಕಿದ್ದಾರೆ.
ಗುಂಡ್ಲುಪೇಟೆ ಸಿಸಿ ಸೆಂಟರಿನಲ್ಲಿ ಹಳೇ ಹಾಡುಗಳಿಗೆ ಹಿರಿಯರು ವಯಸ್ಸನ್ನೂ ಲೆಕ್ಕಿಸದೇ ಪಂಚೆ ಎತ್ತಿ ಕಟ್ಟಿ ಕುಣಿದಿದ್ದು ಚಾಮರಾಜನಗರ ಸಿಸಿ ಕೇಂದ್ರದಲ್ಲಿ ಮಹಿಳೆಯರು, ಮಕ್ಕಳು ರಾಬರ್ಟ್ ಹಾಡಿಗೆ ಮೋಡಿಯಾಗಿ ಕುಣಿದು ಕುಪ್ಪಳಿಸಿದ್ದಾರೆ.
Last Updated : Jun 1, 2021, 7:43 PM IST