ಕರ್ನಾಟಕ

karnataka

ETV Bharat / state

ಕೇರಳದಲ್ಲಿ ಕೊರೊನಾ ಹೆಚ್ಚಳ: 'ಗಡಿ ದಾಟಿ ಬರಬೇಕಾದ್ರೆ RT-PCR ನೆಗೆಟಿವ್ ರಿಪೋರ್ಟ್ ತನ್ನಿ' - ಮೂಲೆಹೊಳೆ ಚೆಕ್‌ಪೋಸ್ಟ್​ಗೆ ಡಿಸಿ ಡಾ. ಎಂ. ಆರ್​. ರವಿ ಭೇಟಿ

ಕೇರಳ ರಾಜ್ಯದಿಂದ ಬರುತ್ತಿರುವ ಸರಕು ಸಾಗಾಣಿಕೆ, ಸಾರ್ವಜನಿಕರ ವಾಹನಗಳು ಸೇರಿದಂತೆ ಎಲ್ಲಾ ಬಗೆಯ ವಾಹನ ತಪಾಸಣೆಯನ್ನು ವೀಕ್ಷಿಸಿದ ಚಾಮರಾಜನಗರ ಡಿಸಿ ಡಾ.ಎಂ.ಆರ್.ರವಿ ಅವರು, ರಾಜ್ಯಕ್ಕೆ ಬರುವವರು ಕಡ್ಡಾಯವಾಗಿ ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿ ತರಬೇಕು. ಎಲ್ಲಾ ವಾಹನಗಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕು ಎಂದು ಚೆಕ್​ಪೋಸ್ಟ್​ ಸಿಬ್ಬಂದಿಗೆ ಖಡಕ್​ ಆಗಿ ಸೂಚಿಸಿದರು.

moolehole checkpost
ಕೇರಳ ಗಡಿ ಮೂಲೆಹೊಳೆ ಚೆಕ್‌ಪೋಸ್ಟ್​ನಲ್ಲಿ ಡಿಸಿ ಡಾ. ಎಂ.ಆರ್​. ರವಿ ವಾಹನಗಳ ತಪಾಸಣೆ ನಡೆಸಿದರು

By

Published : Jul 1, 2021, 10:43 PM IST

ಚಾಮರಾಜನಗರ: ಕೊರೊನಾ ಕಟ್ಟೆಚ್ಚರದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಇಂದು ಗುಂಡ್ಲುಪೇಟೆ ತಾಲೂಕಿನ ಕೇರಳ ಗಡಿ ಮೂಲೆಹೊಳೆ ಚೆಕ್‌ಪೋಸ್ಟ್‌ಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದರು.

ಕೇರಳ ಗಡಿ ಮೂಲೆಹೊಳೆ ಚೆಕ್‌ಪೋಸ್ಟ್​ನಲ್ಲಿ ಡಿಸಿ ಡಾ. ಎಂ.ಆರ್​. ರವಿ ವಾಹನಗಳ ತಪಾಸಣೆ ನಡೆಸಿದರು.

ಕೇರಳ ರಾಜ್ಯದಿಂದ ಬರುತ್ತಿರುವ ಸರಕು ಸಾಗಾಣಿಕೆ, ಸಾರ್ವಜನಿಕರ ವಾಹನಗಳು ಸೇರಿದಂತೆ ಎಲ್ಲಾ ಬಗೆಯ ವಾಹನ ತಪಾಸಣೆಯನ್ನು ವೀಕ್ಷಿಸಿದ ಅವರು, ಕೇರಳದಿಂದ ರಾಜ್ಯಕ್ಕೆ ಬರುವವರು ಕಡ್ಡಾಯವಾಗಿ RT-PCR ನೆಗೆಟಿವ್ ವರದಿ ತರಬೇಕು, ಎಲ್ಲಾ ವಾಹನಗಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕು ಎಂದು ಚೆಕ್​ಪೋಸ್ಟ್​ ಸಿಬ್ಬಂದಿಗೆ ಸೂಚನೆ ನೀಡಿದರು.

ನೆಗೆಟಿವ್ ವರದಿ ಇರುವವರಿಗೆ ಮಾತ್ರ ರಾಜ್ಯ ಪ್ರವೇಶಕ್ಕೆ ಅವಕಾಶ ಕೊಡಿ, ಯಾವುದೇ ಕಾರಣಕ್ಕೂ ವರದಿ ಇಲ್ಲದವರನ್ನು ಬಿಡಬೇಡಿ. RT-PCR ಪರೀಕ್ಷೆಯ ವರದಿಯನ್ನು ವಾಹನಗಳ ದಾಖಲಾತಿ ಪುಸ್ತಕದಲ್ಲಿ ನಮೂದಿಸಬೇಕು. ವರದಿ ಇಲ್ಲದೇ ಬಂದವರನ್ನು ವಾಪಸ್ ಕಳುಹಿಸಿದ ಮಾಹಿತಿಯನ್ನೂ ಬರೆಯಬೇಕು ಎಂದು ಚೆಕ್​ಪೋಸ್ಟ್​ ಸಿಬ್ಬಂದಿಗೆ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಇಳಿಯುತ್ತಿದ್ದು ಸಕ್ರೀಯ ಕೇಸ್​ಗಳು 500 ರ ಆಸುಪಾಸಿನಲ್ಲಿದೆ.‌

ಇದನ್ನೂ ಓದಿ:ಮಾಧ್ಯಮ ಕ್ಷೇತ್ರ, ಪತ್ರಕರ್ತರ ಹಿತರಕ್ಷಣೆಗೆ ಸರ್ಕಾರ ಬದ್ಧ: ಸಿಎಂ ಬಿಎಸ್ವೈ

ABOUT THE AUTHOR

...view details