ಚಾಮರಾಜನಗರ: ಶಾಸಕ ಸಿ.ಪುಟ್ಟರಂಗಶೆಟ್ಟಿ ಸೇರಿದಂತೆ ಒಟ್ಟು 73 ಮಂದಿಗೆ ಇಂದು ಕೋವಿಡ್ ಸೋಂಕು ದೃಢವಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 321ಕ್ಕೆ ಏರಿಕೆಯಾಗಿದೆ.
73 ಹೊಸ ಪ್ರಕರಣಗಳಲ್ಲಿ ಚಾಮರಾಜನಗರದ 38, ಯಳಂದೂರು ಹಾಗೂ ಕೊಳ್ಳೇಗಾಲದಲ್ಲಿ ತಲಾ 6, ಹನೂರಿನಲ್ಲಿ 5, ಗುಂಡ್ಲುಪೇಟೆಯ 38 ಮಂದಿಗೆ ಸೋಂಕು ದೃಢಪಟ್ಟಿದೆ. 5 ಮಂದಿ ಐಸಿಯುನಲ್ಲಿದ್ದು, 208 ಮಂದಿ ಹೋಂ ಐಸೋಲೇಷನ್ನಲ್ಲಿದ್ದಾರೆ.