ಚಾಮರಾಜನಗರ: ಗಂಟಲು ದ್ರವ ತೆಗೆಯುತ್ತಿದ್ದ ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆ ಯಳಂದೂರು ಸರ್ಕಾರಿ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಗಂಟಲು ದ್ರವ ತೆಗೆಯುತ್ತಿದ್ದ ಸಿಬ್ಬಂದಿಗೆ ಕೊರೊನಾ: ಯಳಂದೂರು ಆಸ್ಪತ್ರೆ ಸೀಲ್ ಡೌನ್ - ಯಳಂದೂರು ತಾಲೂಕು ಆಸ್ಪತ್ರೆ ಸಿಬ್ಬಂದಿಗೆ ಕೊರೊನಾ ಸೋಂಕು
ಚಾಮರಾಜನಗರದ ಯಳಂದೂರು ತಾಲೂಕು ಆಸ್ಪತ್ರೆಯಲ್ಲಿ ಕೊರೊನಾ ಶಂಕಿತರ ಗಂಟಲು ದ್ರವ ಸಂಗ್ರಹಿಸುತ್ತಿದ್ದ ಪುರುಷ ವೈದ್ಯಕೀಯ ಸಿಬ್ಬಂದಿ ಕಳೆದ 3 ದಿನದ ಹಿಂದೆ ಜ್ವರ ಬಂದಿದ್ದರಿಂದ ರಜೆ ಹಾಕಿದ್ದರು. ಇದೀಗ ಅವರಿಗೆ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿದೆ.
ಗಂಟಲು ದ್ರವ ಸಂಗ್ರಹಿಸುತ್ತಿದ್ದ ಪುರುಷ ವೈದ್ಯಕೀಯ ಸಿಬ್ಬಂದಿ 3 ದಿನದ ಹಿಂದೆ ಜ್ವರ ಬಂದಿದ್ದರಿಂದ ರಜೆ ಹಾಕಿದ್ದರು. ಇದೀಗ ಅವರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಹೀಗಾಗಿ ಆಸ್ಪತ್ರೆಗೆ ಸೋಂಕು ನಿಯಂತ್ರಕ ದ್ರಾವಣ ಸಿಂಪಡಿಸಿ, ಸೀಲ್ ಡೌನ್ ಮಾಡಲಾಗಿದೆ. ಅಲ್ಲದೆ ಈತನೊಂದಿಗೆ ಸಂಪರ್ಕ ಹೊಂದಿದ್ದ 75ಕ್ಕೂ ಹೆಚ್ಚಿನ ವೈದ್ಯಕೀಯ ಸಿಬ್ಬಂದಿಯ ಕೊರೊನಾ ಪರೀಕ್ಷೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಇದರ ಜೊತೆಗೆ ಈ ಹಿಂದೆ ಸೋಂಕು ದೃಢಪಟ್ಟಿದ್ದ ಯಳಂದೂರಿನ ಸಾಮಾಜಿಕ ಕಾರ್ಯಕರ್ತನ ಪತ್ನಿ ಮತ್ತು ಮಗುವಿಗೂ ಸೋಂಕು ತಗುಲಿದೆ. ಜೊತೆಗೆ ಬೆಂಗಳೂರಿನಿಂದ ಬಂದಿದ್ದ ದಂಪತಿಗೂ ಪಾಸಿಟಿವ್ ಬಂದಿದೆ.