ಚಾಮರಾಜನಗರ: ಪೊಕ್ಸೊ ಪ್ರಕರಣದಡಿ ಕರೆತಂದಿದ್ದ ಸಂತ್ರಸ್ತೆ ಮತ್ತು ಆರೋಪಿ ಇಬ್ಬರಿಗೂ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದ ಪೊಲೀಸರಿಗೆ ಕೋವಿಡ್ ಭೀತಿ ಶುರುವಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ರಾಘವಾಪುರ ಗ್ರಾಮದ 16 ವರ್ಷದ ಬಾಲಕಿಯ ಅಪಹರಣ ಸಂಬಂಧ ಬಾಲಕಿ ಹಾಗೂ 35 ವರ್ಷದ ಯುವಕನನ್ನು ಮಂಗಳವಾರ ರಾತ್ರಿ ಮೈಸೂರಿನಿಂದ ಪೊಲೀಸರು ಕರೆದು ತಂದು ಬೇಗೂರು ಪೊಲೀಸ್ ಠಾಣೆಯಲ್ಲಿರಿಸಿದ್ದರು. ಬಂಧಿಸಲಾದ ಯುವಕ ಹಾಗೂ ಸಂತ್ರಸ್ತೆಯ ಹೇಳಿಕೆಯನ್ನು ಇಲ್ಲಿನ ಪೊಲೀಸ್ ಅಧಿಕಾರಿಗಳು ಬುಧವಾರ ಬೆಳಗ್ಗೆ ಪಡೆದಿದ್ದಾರೆ. ಇದಾದ ಬಳಿಕ ಕೋವಿಡ್ ಪರೀಕ್ಷೆ ಮಾಡಿಸಿದಾಗ ಇಬ್ಬರಿಗೂ ಪಾಸಿಟಿವ್ ಬಂದಿದ್ದು, ಸದ್ಯ ಪೊಲೀಸರು ಆತಂಕಕ್ಕೊಳಗಾಗಿದ್ದಾರೆ.