ಗುಂಡ್ಲುಪೇಟೆ : ಕೋವಿಡ್-19 ದಿಗ್ಬಂಧನದಿಂದ ದಿನದ ಊಟಕ್ಕೂ ತೊಂದರೆ ಅನುಭವಿಸುವವರಿಗೆ ತಾಲೂಕು ಬಿಜೆಪಿ ಘಟಕದ ವತಿಯಿಂದ ಮನೆ ಮನೆಗೆ ತೆರಳಿ ಪಡಿತರ ಮತ್ತು ಧವಸ ಧಾನ್ಯಗಳನ್ನು ವಿತರಿಸಲಾಯಿತು.
ಹಸಿವಿನಿಂದ ಪರದಾಡ್ತಿದ್ದವರಿಗೆ ಗುಂಡ್ಲುಪೇಟೆ ತಾಲೂಕು ಬಿಜೆಪಿ ಘಟಕದಿಂದ ನೆರವು.. - lockdown effect
ಗ್ರಾಮ ಮತ್ತು ಪಟ್ಟಣದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಮತ್ತು ಪಡಿತರ ಚೀಟಿ ಇಲ್ಲದವರ ಮಾಹಿತಿ ಪಡೆದು ಅವರಿಗೆ ಪಡಿತರ ನೀಡಲಾಗುತ್ತಿದೆ. ಪ್ರತಿಯೊಬ್ಬರೂ ಮನೆಯಲ್ಲೇ ಇದ್ದು ಮಕ್ಕಳ ಪೋಷಣೆ ಮಾಡಿ. ಮಕ್ಕಳನ್ನು ಗುಂಪು ಗುಂಪಾಗಿ ಸೇರಲು ಬಿಡಬೇಡಿ.

ಗ್ರಾಮ ಮತ್ತು ಪಟ್ಟಣದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಮತ್ತು ಪಡಿತರ ಚೀಟಿ ಇಲ್ಲದವರ ಮಾಹಿತಿ ಪಡೆದುಕೊಂಡು ಅವರಿಗೆ ಪಡಿತರ ನೀಡಲಾಗುತ್ತಿದೆ. ಪ್ರತಿಯೊಬ್ಬರೂ ಮನೆಯಲ್ಲೇ ಇದ್ದು ಮಕ್ಕಳ ಪೋಷಣೆ ಮಾಡಿ. ಮಕ್ಕಳನ್ನು ಗುಂಪು ಗುಂಪಾಗಿ ಸೇರಲು ಬಿಡಬೇಡಿ. ನೀವು ಕೂಡ ಗುಂಪು ಗುಂಪಾಗಿ ಸೇರಬೇಡಿ ಎಂದು ಮಾಹಿತಿ ನೀಡಿದರು.
ಸಾಮಾಜಿಕ ಜಾಲ ತಾಣದ ಮೂಲಕ ಮಾಹಿತಿ ಪಡೆದುಕೊಂಡು ಕಡುಬಡವರನ್ನು ಗುರುತಿಸಿ ಈ ಕೆಲಸ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಜಗದೀಶ್ ಅವರು, ದೇಶದ ಹಿತದೃಷ್ಟಿಯಿಂದ ದಿಗ್ಬಂಧನ ಹೇರಲಾಗಿದೆ. ಇದರಿಂದಾಗಿ ತೊಂದರೆ ಆಗಬಹುದು. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಮೂಲಕ ಈ ಸೋಂಕಿನ ವಿರುದ್ಧ ಹೋರಾಡಬೇಕು. ಈ ಹೋರಾಟಕ್ಕೆ ಪ್ರತಿಯೊಬ್ಬರ ಸಹಕಾರ ಮುಖ್ಯ ಎಂದರು.