ಕರ್ನಾಟಕ

karnataka

ETV Bharat / state

ಕೋರ್ಟ್​ಗೂ ತಟ್ಟಿದ ಕೊರೊನಾ ಬಿಸಿ: ಕಕ್ಷಿದಾರರು, ಸಾಕ್ಷಿಗಳಿಗಿಲ್ಲ ಕಲಾಪಕ್ಕೆ ಎಂಟ್ರಿ

ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಆದೇಶದನ್ವಯ ಬೆಳಗಾವಿ ಹಾಗೂ ಚಾಮರಾಜನಗರ ಜಿಲ್ಲಾ ಕೋರ್ಟ್​ಗಳಲ್ಲಿ ನಡೆಯಬೇಕಿದ್ದ ಕಲಾಪಗಳನ್ನು ಮುಂದೂಡಲಾಗಿದೆ.

chamarajnagar-and-belgavi
ಬೆಳಗಾವಿ, ಚಾಮರಾಜನಗರ

By

Published : Mar 17, 2020, 3:44 PM IST

ಬೆಳಗಾವಿ, ಚಾಮರಾಜನಗರ: ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಆದೇಶದನ್ವಯ ಬೆಳಗಾವಿ ಹಾಗೂ ಚಾಮರಾಜನಗರ ಜಿಲ್ಲಾ ಕೋರ್ಟ್​ಗಳಲ್ಲಿ ನಡೆಯಬೇಕಿದ್ದ ಕಲಾಪಗಳನ್ನು ಮುಂದೂಡಲಾಗಿದೆ.

ಬೆಳಗಾವಿ ನಗರದ ಡಿಸಿ ಕಚೇರಿ ಎದುರಿಗಿರುವ ಹೊಸ ಮತ್ತು ಹಳೇ ಕೋರ್ಟ್ ಆವರಣದ ಗೇಟುಗಳನ್ನು ಬಂದ್ ಮಾಡಲಾಗಿದ್ದು, ಮಾ. 27 ರವರೆಗೆ ಕಲಾಪಗಳನ್ನು ಮುಂದೂಡಲಾಗಿದೆ. ಆವರಣದ ಒಳಗೆ ವಕೀಲರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಇನ್ನು ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ತೀವ್ರ ನಿಗಾವಹಿಸಲಾಗಿದೆ. ಕೊರೊನಾ ವೈರಸ್ ಹರಡದಂತೆ ಸುಪ್ರೀಂ ಕೋರ್ಟ್ ಆದೇಶದಂತೆ ಕೋರ್ಟ್​ ಕಲಾಪವನ್ನು ಒಂದು ವಾರ ಕಾಲ ಮುಂದೂಡಲಾಗಿದೆ ಎಂದು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಚಾಮರಾಜನಗರ ಜಿಲ್ಲೆ ಕೂಡ ಕೇರಳ, ತಮಿಳುನಾಡು ಗಡಿಗಳನ್ನು ಹಂಚಿಕೊಂಡಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಹೈಕೋರ್ಟ್ ಆದೇಶದಂತೆ ನ್ಯಾಯಾಲಯಗಳ ಸಂಕೀರ್ಣಕ್ಕೆ ಅತೀ ಪ್ರಮುಖ ಪ್ರಕರಣಗಳನ್ನು ಹೊರತುಪಡಿಸಿ ಕಕ್ಷಿದಾರರು, ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿದಾರರಿಗೆ ಕಲಾಪದಲ್ಲಿ ಭಾಗಿಯಾಗಲು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ನಿರ್ಬಂಧ ವಿಧಿಸಲಾಗಿದೆ.

ಕೊರೊನಾ ಭೀತಿ: ಬೆಳಗಾವಿ, ಚಾಮರಾಜನಗರ ಕೋರ್ಟ್​ಗಳಲ್ಲಿ ಕಕ್ಷಿದಾರರು, ಸಾಕ್ಷಿಗಳಿಗೆ ಪ್ರವೇಶ ನಿರ್ಬಂಧ

ಈ ಕುರಿತು ಜಿಲ್ಲಾ ವಕೀಲರ ಸಂಘಧ ಅಧ್ಯಕ್ಷ ಉಮ್ಮತ್ತೂರು ಚಂದ್ರಶೇಖರ್ ಅವರು ಈಟಿವಿ ಭಾರತದೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ಹೇಳಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವ ಸಲುವಾಗಿ ಕಕ್ಷಿದಾರರು ಕಲಾಪದಲ್ಲಿ ಭಾಗಿಯಾಗಲು ಈ ತಿಂಗಳ 21 ರ ವರೆಗೆ ನಿರ್ಬಂಧ ಹೇರಲಾಗಿದೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details