ಕರ್ನಾಟಕ

karnataka

ETV Bharat / state

ಭಿಕ್ಷೆ ಹಾಕಬೇಕಿರುವವರಿಗೇ ಕೊರೊನಾದಿಂದ ವ್ಯಾಪಾರವಿಲ್ಲ.. ಮಂಗಳಮುಖಿಯರ ಬದುಕು ಮೂರಾಬಟ್ಟೆ‌.. - ಮಂಗಳಮುಖಿಯರ ಸುದ್ದಿ

ವ್ಯಾಪಾರಸ್ಥರಿಗೆ ವ್ಯಾಪಾರವೇ ಆಗದಿರುವುದರಿಂದ ಲೈಂಗಿಕ‌ ಅಲ್ಪಸಂಖ್ಯಾತರಿಗೆ ಭಿಕ್ಷೆಯೂ ಸಿಗುತ್ತಿಲ್ಲ. ಜಿಲ್ಲಾಡಳಿತವಾದರೂ ಗಮನಹರಿಸಿ ಮಂಗಳಮುಖಿಯರ ನೆರವಿಗೆ ನಿಲ್ಲಬೇಕಿದೆ..

Transgenders
Transgenders

By

Published : Apr 27, 2021, 7:33 PM IST

Updated : Apr 27, 2021, 10:53 PM IST

ಚಾಮರಾಜನಗರ: ಮನೆಯಿಂದ ಹೊರಗಾಗಿಸಿಕೊಂಡು ಅನ್ಯಮಾರ್ಗವಿಲ್ಲದೇ ಭಿಕ್ಷಾಟನೆ ಮಾಡುವ ಲೈಂಗಿಕ ಅಲ್ಪಸಂಖ್ಯಾತರ ಜೀವನ ಮತ್ತೆ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದ್ದು, ಕೊರೊನಾ ಭಾರೀ ಪೆಟ್ಟನ್ನೇ ಕೊಟ್ಟಿದೆ.

ಕೊರೊನಾ ಕರ್ಫ್ಯೂ ಘೋಷಣೆಯಾಗಿರುವುದರಿಂದ ಮಂಗಳಮುಖಿಯರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಇವರುಗಳು ಜೀವನ ನಡೆಸುವುದೇ ದುಸ್ತರ ಎಂಬ ಸ್ಥಿತಿ ಏರ್ಪಟ್ಟಿದೆ. ಕೆಲ ಅಂಗಡಿ ಮಾಲೀಕರು ದುಡ್ಡು ಕೊಟ್ಟು ಕಳುಹಿಸಿದರೇ, ಇನ್ನಿತರರು ಬೈದು ಕಳುಹಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಮಂಗಳಮುಖಿಯರ ಬದುಕು ಮೂರಾಬಟ್ಟೆ‌
ಕೂಲಿಗೆ ಹೋಗೋಣವೆಂದರೆ ಯಾರೂ ತಮ್ಮನ್ನು ಸೇರಿಸಿಕೊಳ್ಳುವುದಿಲ್ಲ, ಮನೆಯವರು ಸೇರಿಸುವುದಿಲ್ಲ, ಕಳೆದ ಲಾಕ್‌ಡೌನ್‌ನಲ್ಲೇ ಜೀವ ಹಣ್ಣಾಗಿದೆ. ಈಗ ಮತ್ತೊಮ್ಮೆ ಕರ್ಫ್ಯೂ ಎನ್ನುತ್ತಿದ್ದು 15 ದಿನ ಇರುವುದೋ 1 ತಿಂಗಳು ಇರುವುದೋ ಗೊತ್ತಿಲ್ಲ.

ಹೇಗೆ ಜೀವನ ಸಾಗಿಸುವುದು, ಭಿಕ್ಷಾಟನೆ ಹೋಗಲು ಬೆಳಗ್ಗೆ 10ಕ್ಕೆ ಅಂಗಡಿಗಳು ಬಂದ್ ಅಂತಾರೆ, ಸರ್ಕಾರ ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆಯೂ ಯೋಚಿಸಬೇಕು ಎಂದು ಭಾರತಿ ಎಂಬ ಲೈಂಗಿಕ ಅಲ್ಪಸಂಖ್ಯಾತೆ ಅಳಲು ತೋಡಿಕೊಂಡರು.

ವ್ಯಾಪಾರಸ್ಥರಿಗೆ ವ್ಯಾಪಾರವೇ ಆಗದಿರುವುದರಿಂದ ಲೈಂಗಿಕ‌ ಅಲ್ಪಸಂಖ್ಯಾತರಿಗೆ ಭಿಕ್ಷೆಯೂ ಸಿಗುತ್ತಿಲ್ಲ. ಜಿಲ್ಲಾಡಳಿತವಾದರೂ ಗಮನಹರಿಸಿ ಮಂಗಳಮುಖಿಯರ ನೆರವಿಗೆ ನಿಲ್ಲಬೇಕಿದೆ.

Last Updated : Apr 27, 2021, 10:53 PM IST

ABOUT THE AUTHOR

...view details