ಕರ್ನಾಟಕ

karnataka

ETV Bharat / state

ಕೊರೊನಾ ಬಿಕ್ಕಟ್ಟು.. ವ್ಯಾಪಾರಸ್ಥರಿಲ್ಲದೆ ರೈತರ ಬಾಳಲ್ಲಿ ಕಣ್ಣೀರು ತರಿಸುತ್ತಿದೆ ಈರುಳ್ಳಿ - APMC Market

ಕ್ವಿಂಟಾಲ್​​ಗೆ ಸುಮಾರು 10 ಸಾವಿರ ನೀಡಿ ಬಿತ್ತನೆ ಮಾಡಿದ್ದ, ಸಣ್ಣ ಈರುಳ್ಳಿಗೆ ಇದೀಗ ಬೆಲೆ ಇಲ್ಲದಂತಾಗಿದೆ. ಇದಲ್ಲದೆ ಬಂದಷ್ಟು ಬೆಲೆಗೆ ಮಾರಾಟ ಮಾಡಲು ನಿರ್ಧರಿಸಿದರೆ ಅತ್ತ ತಮಿಳುನಾಡಿನಿಂದ ವ್ಯಾಪಾರಸ್ಥರು ಸಹ ಬಾರದೇ ರೈತರ ಬಾಳಲ್ಲಿ ಈರುಳ್ಳಿ ಕಣ್ಣೀರು ತರಿಸುತ್ತಿದೆ.

Corona crisis: Onion bring tears in Farmers in Chamrajnagar
ಕೊರೊನಾ ಬಿಕ್ಕಟ್ಟು: ವ್ಯಾಪಾರಸ್ಥರಿಲ್ಲದೆ ರೈತರ ಬಾಳಲ್ಲಿ ಕಣ್ಣೀರು ತರಿಸುತ್ತಿದೆ ಈರುಳ್ಳಿ

By

Published : Jul 13, 2020, 7:30 PM IST

ಚಾಮರಾಜನಗರ :ತಮಿಳುನಾಡಿನ ವ್ಯಾಪಾರಿಗಳು ಸಣ್ಣ ಈರುಳ್ಳಿ ಕೊಳ್ಳಲು ಬಾರದಿರುವುದರಿಂದ ಗಡಿಜಿಲ್ಲೆ ರೈತರು ಲಕ್ಷಾಂತರ ರೂ. ನಷ್ಟ ಅನುಭವಿಸುತ್ತಿದ್ದಾರೆ.

ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ ಭಾಗದಲ್ಲಿ ಸಾವಿರಾರು ಮಂದಿ ರೈತರು ಉತ್ತಮ ಬೆಲೆಯ ನಿರೀಕ್ಷೆ ಇಟ್ಟುಕೊಂಡು ಸಣ್ಣ ಈರುಳ್ಳಿ ಬೆಳೆದಿದ್ದಾರೆ‌.‌ ಫಸಲು ಚೆನ್ನಾಗಿ ಬಂದರೂ ತಮಿಳುನಾಡಿನ ವ್ಯಾಪಾರಿಗಳು ಕೊರೊನಾ ಭೀತಿ, ಲಾಕ್​ಡೌನ್​​ ಸಂಕಷ್ಟದ ನೆಪವೊಡ್ಡಿ‌‌ ವ್ಯಾಪಾರಕ್ಕೆ ಬರದಿರುವುದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ.

ಕೊರೊನಾ ಬಿಕ್ಕಟ್ಟು.. ವ್ಯಾಪಾರಸ್ಥರಿಲ್ಲದೆ ರೈತರ ಬಾಳಲ್ಲಿ ಕಣ್ಣೀರು ತರಿಸುತ್ತಿದೆ ಈರುಳ್ಳಿ

ಕೆಲವು ತಿಂಗಳ ಹಿಂದೆ ಈರುಳ್ಳಿಗೆ‌ ಉತ್ತಮ ಬೆಲೆ ಬಂದಿದ್ದರಿಂದ ಬಿತ್ತನೆ ಈರುಳ್ಳಿಗೆ ಬರೋಬ್ಬರಿ ಕ್ವಿಂಟಾಲ್​​ಗೆ 8,000-9,000 ರೂ. ಹಣ ತೆತ್ತು ರೈತರು ಖರೀದಿಸಿದ್ದರು. ಕೆಲವು ಕಡೆ ಬಿತ್ತನೆ ಈರುಳ್ಳಿ ಸಿಗದೇ ಪ್ರತಿಭಟನೆ ನಡೆಸಿ ಕೊಂಡುಕೊಂಡಿದ್ದರು.‌

ಈಗ ರೈತರ ಎಲ್ಲಾ ಕನಸು ಕಮರಿದ್ದು‌ ಈರುಳ್ಳಿ ಕೊಳೆಯುತ್ತಿದೆ. ಈ ಕುರಿತು ಯಾನಗಹಳ್ಳಿ ರೈತ ಪ್ರಭುಸ್ವಾಮಿ ಮಾತನಾಡಿ, ಒಂದೂವರೆ ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆದಿದ್ದು, ಫಸಲು ಚೆನ್ನಾಗಿ ಬಂದಿದೆ. ‌ಆದರೆ, ತಮಿಳುನಾಡಿನಿಂದ ಯಾರೂ ವ್ಯಾಪಾರಕ್ಕೆ ಬರುತ್ತಿಲ್ಲ, ಈರುಳ್ಳಿ ಕೊಳೆಯುತ್ತಿದೆ. ಸರ್ಕಾರ ನಮ್ಮ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸಿದರು.

ಯಾನಗಹಳ್ಳಿ ಗ್ರಾಮದ ಮತ್ತೋರ್ವ ಮಹಾದೇವಸ್ವಾಮಿ ಮಾತನಾಡಿ, ಅನ್‌​​ಲಾಕ್ ಆದರೂ ರೈತರ ಸಂಕಷ್ಟ ಮಾತ್ರ ಬಗೆಹರಿದಿಲ್ಲ.‌ ಜಿಲ್ಲಾಡಳಿತ ಈರುಳ್ಳಿ ಬೆಳೆಗಾರರ ನೆರವಿಗೆ ಧಾವಿಸಬೇಕು. 8,000-9,000 ರೂ. ಕೊಟ್ಟು ತಂದು ಬೆಳೆದಿದ್ದೇವೆ‌‌. ಈಗ ಬೆಲೆ 1,000-1,200 ರೂ. ಆಗಿದೆ. ವ್ಯಾಪಾರಿಗಳು, ದಲ್ಲಾಳಿಗಳು ಬರದೇ ಅತಂತ್ರರಾಗಿದ್ದೇವೆ ಎಂದು ಅಳಲು ತೋಡಿಕೊಂಡರು.

ABOUT THE AUTHOR

...view details