ಕರ್ನಾಟಕ

karnataka

ETV Bharat / state

ಚಾಮರಾಜನಗರದಲ್ಲಿ ಕೊರೊನಾ ಏರುಗತಿ: ಶತಕ ದಾಟಿದ ಸಕ್ರಿಯ ಪ್ರಕರಣ - ಚಾಮರಾಜನಗರ ಇತ್ತೀಚಿನ ಸುದ್ದಿ

ಚಾಮರಾಜನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, 102 ಸಕ್ರಿಯ ಪ್ರಕರಣಗಳಿವೆ. ಇದು ಜನರಲ್ಲಿ ಆತಂಕ ಮೂಡಿಸಿದೆ.

ಚಾಮರಾಜನಗರ
ಚಾಮರಾಜನಗರ

By

Published : Dec 10, 2020, 7:43 PM IST

ಚಾಮರಾಜನಗರ:ಕೊರೊನಾ ಮುಕ್ತ ಆಗುತ್ತಿದೆ ಎಂಬ ಆಶಾಭಾವದ ನಡುವೆ ಜಿಲ್ಲೆಯಲ್ಲಿ ಮತ್ತೆ ಪ್ರಕರಣಗಳ ಸಂಖ್ಯೆ ಏರುಗತಿ ಕಂಡಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ‌ ಶತಕ ದಾಟಿದೆ.

ಈ ಕುರಿತು, ಡಿಎಚ್ಒ ಡಾ.ರವಿ ಈಟಿವಿ ಭಾರತದೊಂದಿಗೆ ಮಾತನಾಡಿ, ಹೊಸ ಪ್ರಕರಣಗಳು ಕಳೆದ 8 ದಿನಗಳಿಂದ ಏರಿಕೆಯಾಗುತ್ತಿದೆ. ಕೊರೊನಾ ಮಹಾಮಾರಿ ಕ್ರಮೇಣ ಕಡಿಮೆಯಾಗಿ ಜಿಲ್ಲೆಯಲ್ಲಿ ಕೇವಲ 66 ಸಕ್ರಿಯ ಪ್ರಕರಣಗಳಿಗೆ ಇಳಿದಿತ್ತು. ಆದರೆ, ಈಗ ಮತ್ತೆ ಏರುಗತಿ ಕಂಡು ಆ್ಯಕ್ಟಿವ್ ಕೇಸ್​ಗಳು ಶತಕ ಮುಟ್ಟಿವೆ. ಸಾವಿನ ಪ್ರಮಾಣ ಬಹಳ ಕಡಿಮೆಯಿದೆ ಎಂದು ತಿಳಿಸಿದರು.

ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚು ಮಾಡಿದ್ದು ವ್ಯಾಕ್ಸಿನ್ ಶೇಖರಣೆಗೂ ಸಿದ್ಧತೆ ನಡೆಸಿದ್ದೇವೆ. ಸಾರ್ವಜನಿಕರು ಸಭೆ-ಸಮಾರಂಭಗಳಲ್ಲಿ ಸೇರುವುದು, ಬೇಕಾಬಿಟ್ಟಿ ತಿರುಗಾಡುವುದನ್ನು ನಿಲ್ಲಿಸಬೇಕು. ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.

ಗುರುವಾರದ ಅಂಕಿ ಅಂಶದಂತೆ ಕೋವಿಡ್ ಸೋಂಕಿತರ ಸಂಖ್ಯೆ 6,482ಕ್ಕೆ ತಲುಪಿದ್ದು 102 ಸಕ್ರಿಯ ಪ್ರಕರಣಗಳಿವೆ. 128 ಮಂದಿ ಮೃತಪಟ್ಟಿದ್ದು ಪರೀಕ್ಷೆಗಳ ಸಂಖ್ಯೆ 1.35 ಲಕ್ಷ ದಾಟಿದೆ.

ಇನ್ನು ನಿರಂತರ ಜಾಗೃತಿ ಮೂಲಕ ಜಿಲ್ಲೆಯ ಜನರು ಮಾಸ್ಕ್​ಗಳನ್ನು ಕಟ್ಟುನಿಟ್ಟಾಗಿ ಧರಿಸುತ್ತಿದ್ದರು. ಆದರೆ, ಜಾಗೃತಿ ಕಡಿಮೆಯಾದಂತೆ ಜನರು ಅಸಡ್ಡೆಯಿಂದ ವರ್ತಿಸುತ್ತಿದ್ದು ಮುಖಗವಸು ಹಾಕುವವರ ಸಂಖ್ಯೆ ತೀರಾ ಕಡಿಮೆಯಾಗಿದೆ.

ABOUT THE AUTHOR

...view details